Select Your Language

Notifications

webdunia
webdunia
webdunia
webdunia

IPL 2025: ಮೂರು ಐಪಿಎಲ್ ಫೈನಲ್ ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಇಲ್ಲಿದೆ ವಿವರ

RCB team

Krishnaveni K

ಬೆಂಗಳೂರು , ಶನಿವಾರ, 31 ಮೇ 2025 (08:44 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಗೇರಿದೆ. ಕಳೆದ ಮೂರೂ ಬಾರಿ ಆರ್ ಸಿಬಿ ಪರ ಫೈನಲ್ ಪಂದ್ಯವಾಡಿದ್ದ ವಿರಾಟ್ ಕೊಹ್ಲಿ ಗಳಿಸಿದ್ದ ರನ್ ಗಳೆಷ್ಟು ಇಲ್ಲಿದೆ ವಿವರ.

2009, 2011 ಮತ್ತು 2016 ರಲ್ಲಿ ಆರ್ ಸಿಬಿ ಫೈನಲ್ ಗೇರಿತ್ತು. ಈ ಮೂರೂ ಬಾರಿಯೂ ವಿರಾಟ್ ಕೊಹ್ಲಿ ಆರ್ ಸಿಬಿ ಪರ ಆಡಿದ್ದರು. 2011 ಮತ್ತು 2016 ರಲ್ಲಿ ಕೊಹ್ಲಿ ಕ್ಯಾಪ್ಟನ್ ಕೂಡಾ ಆಗಿದ್ದರು. 2009 ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿತ್ತು. ಎರಡು ಬಾರಿ ಕೂದಲೆಳೆಯಲ್ಲಿ ಆರ್ ಸಿಬಿ ಕಪ್ ಗೆಲ್ಲು ಅವಕಾಶ ಮಿಸ್ ಮಾಡಿಕೊಂಡಿತ್ತು.

2009 ರಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ ಅನಿಲ್ ಕುಂಬ್ಳೆ ನೇತೃತ್ವದ ಆರ್ ಸಿಬಿ ಫೈನಲ್ ಪಂದ್ಯದಲ್ಲಿ ಕೇವಲ 6 ರನ್ ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿ ಗಳಿಸಿದ್ದು ಕೇವಲ 7 ರನ್.

2011 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಫೈನಲ್ ಆಡಿತ್ತು. ಈ ಪಂದ್ಯವನ್ನು ಆರ್ ಸಿಬಿ 58 ರನ್ ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು 58 ರನ್.

2016 ರಲ್ಲಿ ಆರ್ ಸಿಬಿ ಸೋಲು ಅಭಿಮಾನಿಗಳ ಹೃದಯವನ್ನೂ ಚೂರು ಮಾಡಿತ್ತು. ಆ ಪಂದ್ಯದಲ್ಲಿ ಆರಂಭಿಕ ವಿಕೆಟ್ ಗೆ ಆರ್ ಸಿಬಿ ಭರ್ಜರಿ ಆರಂಭವನ್ನೇ ಪಡೆದಿತ್ತು. ಎದುರಾಳಿ ಎಸ್ಆರ್ ಎಚ್ 208 ರನ್ ಗಳಿಸಿತ್ತು. ಆದರೆ ಆರ್ ಸಿಬಿ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 8 ರನ್. ಈ ಸೋಲನ್ನು ಆರ್ ಸಿಬಿ ಫ್ಯಾನ್ಸ್, ಕೊಹ್ಲಿ ಇನ್ನೂ ಮರೆತಿಲ್ಲ. ಹೀಗಾಗಿ ಈ ಎಲ್ಲಾ ನಿರಾಸೆಗಳನ್ನು ಮರೆಸಲು ಈ ಬಾರಿ ಕಪ್ ಗೆಲ್ಲಲಿ ಎನ್ನುವುದೇ ಅಭಿಮಾನಿಗಳ ಆಶಯ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ನಮ್ಗೆ ಫೈನಲ್ ನಲ್ಲಿ ಆರ್ ಸಿಬಿ ವರ್ಸಸ್ ಮುಂಬೈ ಬೇಕೇ ಬೇಕು