Select Your Language

Notifications

webdunia
webdunia
webdunia
webdunia

ಸಚಿನ್ ಪುತ್ರಿಯ ಬಿಟ್ಟು ಇನ್ನೊಬ್ಬ ಹುಡುಗಿಗೆ ಕ್ಲೀನ್ ಬೋಲ್ಡ್ ಆದ್ರಾ ಶುಬ್ಮನ್ ಗಿಲ್

Shubman Gill

Krishnaveni K

ಮುಂಬೈ , ಮಂಗಳವಾರ, 28 ಮೇ 2024 (13:47 IST)
Photo Credit: X
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಶುಬ್ಮನ್ ಗಿಲ್ ಈಗ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಬಿಟ್ಟು ಮತ್ತೊಬ್ಬ ಬೆಡಗಿಯ ಹಿಂದೆ ಬಿದ್ದಿದ್ದಾರೆ ಎಂಬ ಗುಸು ಗುಸು ಕೇಳಿಬಂದಿದೆ.

ಶುಬ್ಮನ್ ಗಿಲ್ ಮತ್ತು ಸಾರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲವು ಸಮಯದ ಹಿಂದೆ ಭಾರೀ ಸುದ್ದಿಯಾಗಿತ್ತು. ಇಬ್ಬರೂ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದು ಈ ಸುದ್ದಿಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಈ ನಡುವೆ ಮೈದಾನದಲ್ಲೂ ಗಿಲ್ ಆಡುತ್ತಿರಬೇಕಾದರೆ ಪ್ರೇಕ್ಷಕರು ಸಾರಾ ಹೆಸರೆತ್ತಿ ಕಿಚಾಯಿಸುತ್ತಿದ್ದರು.

ಈಗ ಗಿಲ್ ಹೆಸರು ಮತ್ತೊಬ್ಬಾಕೆಯ ಜೊತೆ ಕೇಳಿಬರುತ್ತಿದೆ. ಹೀಗಾಗಿ ಸಾರಾ ಬಿಟ್ಟು ಈ ಹುಡುಗಿಯ ಹಿಂದೆ ಬಿದ್ದರಾ ಎಂಬ ಗಾಸಿಪ್ ಕೇಳಿಬರುತ್ತಿದೆ. ಐಪಿಎಲ್ ಪಂದ್ಯಾವಳಿ ವೇಳೆ ಗಿಲ್ ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಅಭಿಷೇಕ್ ಶರ್ಮ ಸಹೋದರಿ ಕೋಮಲ್ ಶರ್ಮ ಜೊತೆ ಫೋಟೋಗೆ ಪೋಸ್ ನೀಡಿದ್ದು ಈ ಅನುಮಾನಕ್ಕೆ ಕಾರಣವಾಗಿದೆ.

ಗಿಲ್ ಆಡುತ್ತಿರಬೇಕಾದರೆ ಮೈದಾನದಲ್ಲೇ ಕೋಮಲ್ ಫ್ಲೈಯಿಂಗ್ ಕಿಸ್ ಮಾಡಿದ್ದು ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಕೋಮಲ್ ಜೊತೆ ಗಿಲ್ ಫೋಟೋಗೆ ಪೋಸ್ ಕೊಟ್ಟಿದ್ದರು. ಇದನ್ನು ನೋಡಿ ಅಭಿಮಾನಿಗಳು ಸಾರಾಗೆ ಕೈ ಕೊಟ್ಟು ಕೋಮಲ್ ಹಿಂದೆ ಬಿದ್ದರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೋಡಲು ಸಿಂಪಲ್ ಆದ್ರೂ ಕಾವ್ಯಾ ಮಾರನ್ ಭಾರೀ ಸಿರಿವಂತೆ