Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಆಗಕ್ಕೆ ಹೊರಟ್ರು... ಶುಭಮನ್ ಗಿಲ್ ಟ್ರೋಲ್

Shubhman Gill
ಮುಂಬೈ: ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾದ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ರನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಆಗಕ್ಕೆ ಹೊರಟವರ ಕತೆ ಹೀಗಾಗಿದೆ ಎಂದಿದ್ದಾರೆ.

ಶುಭಮನ್ ಗಿಲ್ ಅಪಾರ ಭರವಸೆ ಮೂಡಿಸಿದ್ದ ಆಟಗಾರ. ಟೆಸ್ಟ್ ಮತ್ತು ಏಕದಿನ ಮಾದರಿಗೆ ಅವರೇ ತಂಡದ ನಾಯಕ. ಟಿ20 ತಂಡದಲ್ಲೂ ಗಿಲ್ ರನ್ನು ನಾಯಕನಾಗಿ ಮಾಡಬೇಕು ಎಂಬ ಆಕಾಂಕ್ಷೆ ಗೌತಮ್ ಗಂಭೀರ್ ಗಿತ್ತು. ಇದಕ್ಕಾಗಿ ಅವರನ್ನು ಟಿ20 ತಂಡದ ಆರಂಭಿಕನಾಗಿ ಮಾಡಿದ್ದರು.

ಆದರೆ ಗಿಲ್ ಕಿರು ಮಾದರಿಯಲ್ಲಿ ಹೇಳಿಕೊಳ್ಳುವ ಯಶಸ್ಸುಸಾಧಿಸಲಿಲ್ಲ. ಹೀಗಾಗಿಯೇ ಅವರನ್ನು ಇದೀಗ ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ. ಒಬ್ಬ ಆಟಗಾರನಾಗಿ ಅವರಿಗೆ ಇದು ತೀವ್ರ ಹಿನ್ನಡೆ ಮತ್ತು ಮಾನಸಿಕವಾಗಿ ಕುಗ್ಗಿ ಹೋದ ಸಮಯ.

ಆದರೆ ಅದಕ್ಕಿಂತ ಹೆಚ್ಚು ಅವರಿಗೆ ಟ್ರೋಲ್ ಗಳು ನೋವು ಕೊಡಬಹುದು. ತಮ್ಮ ವೃತ್ತಿ ಜೀವನದಲ್ಲಿ ಆರಂಭದಲ್ಲಿ ವಿರಾಟ್ ಕೊಹ್ಲಿಯನ್ನೇ ಮೀರಿಸಬಹುದು ಎಂಬ ಭರವಸೆ ಮೂಡಿಸಿದ್ದರು. ಪ್ರಿನ್ಸ್ ಎಂದು ಅಡ್ಡ ಹೆಸರು ಬೇರೆ ಬಂದಿತ್ತು. ಆದರೆ ಅವರ ಇತ್ತೀಚೆಗಿನ ಫಾರ್ಮ್ ಗಮನಿಸಿದರೆ ಅದೆಲ್ಲವೂ ಹುಸಿಯಾಗಿದೆ ಎನಿಸುತ್ತಿದೆ. ಹೀಗಾಗಿಯೇ ಅಭಿಮಾನಿಗಳು ನಿರ್ದಾಕ್ಷಿಣ್ಯವಾಗಿ ಅವರನ್ನು ಕಟು ಶಬ್ಧಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲರಿಗೂ ಕೊಹ್ಲಿ ಆಗಲು ಸಾಧ್ಯವಿಲ್ಲ. ಕೊಹ್ಲಿ ಆಗುತ್ತೇನೆಂದು ಹೊರಟ ಗಿಲ್ ಈಗ ಬಾಬರ್ ಅಜಮ್ ಥರಾ ಆದ್ರು ಎಂದು ಕೆಲವರು ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Women's T20: ಏಕದಿನ ವಿಶ್ವಕಪ್‌ ವಿಜೇತ ಹರ್ಮನ್‌ಪ್ರೀತ್‌ ಪಡೆಗೆ ಇಂದಿನಿಂದ ಮತ್ತೊಂದು ಅಗ್ನಿಪರೀಕ್ಷೆ