Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ ಹೊಸ ಅವತಾರ ಜಾಹೀರುಪಡಿಸಿದ ಪತಿ ಶೊಯೇಬ್

ಸಾನಿಯಾ ಮಿರ್ಜಾ ಹೊಸ ಅವತಾರ ಜಾಹೀರುಪಡಿಸಿದ ಪತಿ ಶೊಯೇಬ್
ಹೈದರಾಬಾದ್ , ಮಂಗಳವಾರ, 19 ಜೂನ್ 2018 (09:28 IST)
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಸದ್ಯಕ್ಕೆ ಟೆನಿಸ್ ಅಂಕಣದಿಂದ ದೂರವಿರುವುದು ಮಾತ್ರವಲ್ಲ, ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ.

ಆದರೆ ಶನಿವಾರ ಪತಿ ಶೊಯೇಬ್ ಮಲಿಕ್ ಜತೆಗೆ ತಮ್ಮ ನಿವಾಸದಲ್ಲಿ ಸಾನಿಯಾ ಈದ್ ಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪತಿ ಜತೆಗೆ ಫೋಟೋಗೆ ಪೋಸ್ ನೀಡಿದ್ದಾರೆ.

ಗರ್ಭಿಣಿ ಸಾನಿಯಾ ಜತೆಗಿನ ಫೋಟೋವನ್ನು ಶೊಯೇಬ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದು, ಅಭಿಮಾನಿಗಳಿಗೆ ಇದೇ ಮೊದಲ ಬಾರಿಗೆ ತಮ್ಮ ಉಬ್ಬು ಹೊಟ್ಟೆ ದರ್ಶನ ಮಾಡಿಸಿದ್ದಾರೆ. ಜತೆಗೆ ಈದ್ ಹಬ್ಬಕ್ಕೆ ಶುಭಾಷಯವನ್ನೂ ಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿಗೆ ಬಂದ ಕೇಂದ್ರ ಸಚಿವ