Publish Date: Tue, 12 Mar 2019 (09:23 IST)
Updated Date: Tue, 12 Mar 2019 (09:25 IST)
ಮೊಹಾಲಿ: ಟೀಂ ಇಂಡಿಯಾ ವಿರುದ್ಧ ನಾಲ್ಕನೇ ಏಕದಿನ ಗೆಲುವಿಗೆ ರೂವಾರಿಯಾಗಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಅಸ್ಟೋನ್ ಟರ್ನರ್ ಹೆಸರು ಮರೆತು ಶಿಖರ್ ಧವನ್ ನಗೆಪಾಟಲಿಗೀಡಾಗಿದ್ದಾರೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಧವನ್ ಗೆ ಟರ್ನರ್ ಹೆಸರು ಹೇಳಲು ಬರಲಿಲ್ಲ. ಬದಲಿಗೆ ‘ಆ ವ್ಯಕ್ತಿ... ಚೆನ್ನಾಗಿ ಆಡಿದರು’ ಎಂದು ಹೇಳಿದರು. ಇದೇ ವಿಚಾರಕ್ಕೆ ಇದೀಗ ಆಸ್ಟ್ರೇಲಿಯಾ ಮಾಧ್ಯಮ ಧವನ್ ರನ್ನು ತಮಾಷೆ ಮಾಡಿದೆ.
‘ಆಶ್? ಅಲ್ಲ.. ಆ ವ್ಯಕ್ತಿ ಭಾರತವನ್ನು ಸೋಲಿಸಿದ’ ಎಂದು ಆಸೀಸ್ ಮಾಧ್ಯಮಗಳು ಧವನ್ ರನ್ನು ಕಿಚಾಯಿಸಿವೆ. ಈ ಪಂದ್ಯದಲ್ಲಿ ಆಸ್ಟೋನ್ ಟರ್ನರ್ 43 ಬಾಲ್ ಗಳಲ್ಲಿ 84 ರನ್ ಗಳಿಸಿ ಆಸೀಸ್ ಗೆಲುವಿನ ರೂವಾರಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ