Select Your Language

Notifications

webdunia
webdunia
webdunia
webdunia

ಮಗನನ್ನು ಸಂಪರ್ಕಿಸದಂತೆ ಬ್ಲಾಕ್ ಮಾಡಿದ್ದಾರೆ ಎಂದು ನೋವು ತೋಡಿಕೊಂಡ ಶಿಖರ್ ಧವನ್

ಮಗನನ್ನು ಸಂಪರ್ಕಿಸದಂತೆ ಬ್ಲಾಕ್ ಮಾಡಿದ್ದಾರೆ ಎಂದು ನೋವು ತೋಡಿಕೊಂಡ ಶಿಖರ್ ಧವನ್
ನವದೆಹಲಿ , ಬುಧವಾರ, 27 ಡಿಸೆಂಬರ್ 2023 (08:15 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ವೈವಾಹಿಕ ಜೀವನದಲ್ಲಿ ಬಿರುಕುಂಟಾಗಿದ್ದರಿಂದ ಪ್ರೀತಿಯ ಪುತ್ರನಿಂದ ದೂರವಿರಬೇಕಿದೆ.

ಪುತ್ರ ಝೊರಾವರ್ ಈಗ ಧವನ್ ಮಾಜಿ ಪತ್ನಿ ಆಯೆಷಾ ಜೊತೆ ಆಸ್ಟ್ರೇಲಿಯಾದಲ್ಲಿದ್ದಾನೆ. ವಿಚ್ಛೇದನ ವೇಳೆ ಧವನ್ ನನಗೆ ಮಗನನ್ನು ನೋಡಲು ಅವಕಾಶ ನೀಡುತ್ತಿಲ್ಲ ಎಂದು ಕೋರ್ಟ್ ನಲ್ಲಿ ಅಳಲು ತೋಡಿಕೊಂಡಿದ್ದರು. ಅಲ್ಲದೆ, ಪತ್ನಿ ಆಯೆಷಾ ಆಸ್ತಿಯನ್ನೂ ಕಿತ್ತುಕೊಂಡಿದ್ದಾಳೆ ಎಂದು ದೂರಿದ್ದರು. ಹೀಗಾಗಿ ವಿಚ್ಛೇದನ ನೀಡುವಾಗ ಕೋರ್ಟ್ ಧವನ್ ಗೆ ರಜೆ ಸಮಯದಲ್ಲಿ 15 ದಿನ ಮಗನ ಜೊತೆ ಇರಲು ಅವಕಾಶ ನೀಡಲು ಆದೇಶಿಸಿತ್ತು.

ಇದೀಗ ಧವನ್ ಮಗನ ಜೊತೆಗಿರಲು ಸಾಧ್ಯವಾಗುತ್ತಿಲ್ಲ ಎಂಬ ನೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಝೊರಾವರ್ ಹುಟ್ಟುಹಬ್ಬಕ್ಕೆ ಶುಭಕೋರಿ ಸಂದೇಶ ಬರೆದಿರುವ ಧವನ್, ಮಗನನ್ನು ಸಂಪರ್ಕಿಸದಂತೆ ಎಲ್ಲಾ ಮಾರ್ಗಗಳನ್ನು ತಡೆಯಲಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ನಿನ್ನ ಜೊತೆಗೆ ಸದಾ ನನಗೆ ಇರಲು ಅವಕಾಶವಿಲ್ಲ. ಹಾಗಿದ್ದರೂ ಪ್ರತಿನಿತ್ಯ ನಿನ್ನ ಜೊತೆಗಿರುವ ಹಾಗೆ ಕಲ್ಪಿಸುತ್ತೇನೆ. ನಿನ್ನ ಜೊತೆಗೆ ಮನಸ್ಸಿನಲ್ಲೆ ಮಾತನಾಡುತ್ತೇನೆ. ನಿನ್ನನ್ನು ಸಂಪರ್ಕಿಸುವ ಎಲ್ಲಾ ಹಾದಿಗಳನ್ನು ಬಂದ್ ಮಾಡಲಾಗಿದೆ. ಆದರೂ ನಿನಗೆ ಜೀವನದಲ್ಲಿ ಎಲ್ಲಾ ಖುಷಿ, ಯಶಸ್ಸು ಸಿಗಲೆಂದು ಹಾರೈಸುತ್ತೇನೆ ಎಂದು ಸುದೀರ್ಘವಾಗಿ ಸಂದೇಶ ಬರೆದಿದ್ದಾರೆ. ಅವರ ಸಂದೇಶಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇಷ್ಟೊಂದು ನೋವನ್ನು ಎದೆಯಲ್ಲಿಟ್ಟುಕೊಂಡು ಹೇಗೆ ನಗು ನಗುತ್ತಾ ಬದುಕುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND v/s SA Boxing Day test: ರಬಾಡ ದಾಳಿಗೆ ನಲುಗಿದ ಟೀಂ ಇಂಡಿಯಾ