ಸಿಡ್ನಿ: ಮೊನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವು ಸಹಜವಾದುದು ಎಂದು ಥ್ಯಾಲ್ಯಾಂಡ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶೇನ್ ವಾರ್ನ್ ಮೃತದೇಹದ ಅಟೋಪ್ಸಿ ನಡೆಸಿದ ಬಳಿಕ ಇದು ಸಹಜ ಸಾವು ಎಂದು ವರದಿ ಬಂದಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಥಾಯ್ ಪೊಲೀಸರು ಶೇನ್ ಮೃತಪಟ್ಟ ವಿಲ್ಲಾದ ಕೊಠಡಿಯಲ್ಲಿ ರಕ್ತದ ಕಲೆಗಳಿದ್ದವು ಎಂದಿದ್ದರು.
ಹೀಗಾಗಿ ಅವರ ಸಾವಿನ ಬಗ್ಗೆ ಅನುಮಾನ ಮೂಡಿದ್ದವು. ಆದರೆ ಈಗ ಸಹಜ ಸಾವು ಎಂದು ವೈದ್ಯಕೀಯ ವರದಿಯಲ್ಲಿ ಸ್ಪಷ್ಟನೆ ನೀಡಲಾಗಿದೆ.