Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಪುದುಚೇರಿ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ರಣಜಿ ಟ್ರೋಫಿ ಕ್ರಿಕೆಟ್: ಪುದುಚೇರಿ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ
ಚೆನ್ನೈ , ಭಾನುವಾರ, 6 ಮಾರ್ಚ್ 2022 (17:34 IST)
ಚೆನ್ನೈ: ಕರ್ನಾಟಕ ಮತ್ತು ಪುದುಚೇರಿ ನಡುವೆ ನಡೆದ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಇನಿಂಗ್ಸ್ ಮತ್ತು 20 ರನ್ ಗಳ ಅಂತರದ ಭರ್ಜರಿ ಜಯ ಸಿಕ್ಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 453 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕರ್ನಾಟಕ ಪರ ದೇವದತ್ತ್ ಪಡಿಕ್ಕಲ್ 178 ರನ್ ಗಳಿಸಿ ಮಿಂಚಿದರು. ಇದಕ್ಕೆ ಉತ್ತರವಾಗಿ ಪುದುಚೇರಿ ಮೊದಲ ಇನಿಂಗ್ಸ್ ನಲ್ಲಿ 241 ರನ್ ಗಳಿಗೆ ಆಲೌಟ್ ಆಗಿತ್ತು.

ಬಳಿಕ ಕರ್ನಾಟಕ ಫಾಲೋ ಆನ್ ಹೇರಿತ್ತು. ಹೀಗಾಗಿ ಮತ್ತೆ ದ್ವಿತೀಯ ಸರದಿ ಆರಂಭಿಸಿದ ಪುದುಚೇರಿ ಕೇವಲ 192 ರನ್ ಗಳಿಗೆ ಆಲೌಟ್ ಆಯಿತು. ಶ್ರೇಯಸ್ ಗೋಪಾಲ್ 5 ವಿಕೆಟ್ ಕಬಳಿಸಿದರು. ಶತಕ ಗಳಿಸಿದ ದೇವದತ್ತ್ ಪಡಿಕ್ಕಲ್ ಪಂದ್ಯ ಶ್ರೇಷ್ಠರಾದರು. ಇದುವರೆಗೆ ಕರ್ನಾಟಕ ಆಡಿದ ಮೂರು ಲೀಗ್ ಪಂದ್ಯಗಳಲ್ಲಿ ಎರಡರಲ್ಲಿ ಜಯ ಗಳಿಸಿದ್ದು, ಒಂದನ್ನು ಡ್ರಾ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಪಿಲ್ ದಾಖಲೆ ಮುರಿದ ಅಶ್ವಿನ್, ಇತಿಹಾಸ ಬರೆದ ಜಡೇಜಾ