Select Your Language

Notifications

webdunia
webdunia
webdunia
webdunia

ಭಾರತ-ಲಂಕಾ ಟೆಸ್ಟ್: ಫಾಲೋ ಆನ್ ಬಳಿಕ ಸಂಕಷ್ಟದಲ್ಲಿ ಶ್ರೀಲಂಕಾ

ಭಾರತ-ಲಂಕಾ ಟೆಸ್ಟ್: ಫಾಲೋ ಆನ್ ಬಳಿಕ ಸಂಕಷ್ಟದಲ್ಲಿ ಶ್ರೀಲಂಕಾ
ಮೊಹಾಲಿ , ಭಾನುವಾರ, 6 ಮಾರ್ಚ್ 2022 (13:45 IST)
ಮೊಹಾಲಿ: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಶ್ರೀಲಂಕಾ ವಿರುದ್ಧ ಫಾಲೋ ಆನ್ ಹೇರಿದ್ದು, ದ್ವಿತೀಯ ಇನಿಂಗ್ಸ್ ಮತ್ತೆ ಬೇಗನೇ ವಿಕೆಟ್ ಕಳೆದುಕೊಂಡು ಲಂಕಾ ಸಂಕಷ್ಟಕ್ಕೀಡಾಗಿದೆ.

ಇತ್ತೀಚೆಗಿನ ವರದಿ ಬಂದಾಗ ಲಂಕಾ ದ್ವಿತೀಯ ಸರದಿಯಲ್ಲಿ 3 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ಅನುಭವಿ ಆಂಜಲೋ ಮ್ಯಾಥ್ಯೂಸ್ 20, ಧನಂಜಯ ಡಿ ಸಿಲ್ವ 20 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಭಾರತದ ಪರ ಈಗಾಗಲೇ ರವಿಚಂದ್ರನ್ ಅಶ್ವಿನ್ 2, ಮೊಹಮ್ಮದ್ ಶಮಿ 1 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಲಂಕಾ ಮೊದಲ ಇನಿಂಗ್ಸ್ 174 ರನ್ ಗಳಿಗೆ ಸಮಾಪ್ತಿಯಾಗಿತ್ತು. ಮೊದಲ ಇನಿಂಗ್ಸ್ ನಲ್ಲಿ ಭಾರತದ ಪರ ರವೀಂದ್ರ ಜಡೇಜಾ 5 ವಿಕೆಟ್ ಗಳ ಗೊಂಚಲು ಪಡೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಏಕದಿನ ವಿಶ್ವಕಪ್: ಮಿಂಚಿದ ಕನ್ನಡತಿ ರಾಜೇಶ್ವರಿ ಗಾಯಕ್ ವಾಡ್, ಭಾರತಕ್ಕೆ ಜಯ