ಟೀಂ ಇಂಡಿಯಾ ಫೈನಲ್ ಗೆ ಬರಲಿ, ಕಪ್ ಗೆಲ್ಲೋದು ನಾವೇ: ಪಾಕ್ ವೇಗಿ ಶಾಹಿನ್ ಅಫ್ರಿದಿ

Krishnaveni K
ಗುರುವಾರ, 25 ಸೆಪ್ಟಂಬರ್ 2025 (12:50 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ 2025 ರಲ್ಲಿ ಟೀಂ ಇಂಡಿಯಾ ಫೈನಲ್ ಗೆ ಬರಲಿ, ಹೇಗಿದ್ದರೂ ಕಪ್ ಗೆಲ್ಲೋರು ನಾವೇ ಎಂದು ಪಾಕಿಸ್ತಾನ ವೇಗಿ ಶಾಹಿನ್ ಅಫ್ರಿದಿ ಸವಾಲು ಹಾಕಿದ್ದಾರೆ.

ಏಷ್ಯಾ ಕಪ್ ನ ಎರಡೂ ಸೂಪರ್ ಫೋರ್ ಪಂದ್ಯ ಗೆದ್ದ ಟೀಂ ಇಂಡಿಯಾ ಈಗ ಫೈನಲ್ ಗೆ ಲಗ್ಗೆಯಿಟ್ಟಿದೆ. ಇದಕ್ಕೆ ಮೊದಲು ಮಾಧ್ಯಮಗಳ ಮುಂದೆ ಮಾತನಾಡಿದ್ದ ಪಾಕಿಸ್ತಾನ ವೇಗಿ ಶಾಹಿನ್ ಅಫ್ರಿದಿ, ಕಪ್ ಗೆಲ್ಲೋರು ನಾವೇ ಎಂದಿದ್ದಾರೆ.

ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕ್ ನಮಗೆ ಪ್ರತಿಸ್ಪರ್ಧಿಯೇ ಅಲ್ಲ ಎಂದು ವ್ಯಂಗ್ಯ ಮಾಡಿದ್ದರು. ಇದರ ಬಗ್ಗೆ ಶಾಹಿನ್ ಅಫ್ರಿದಿಗೆ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನಿಸಲಾಯಿತು.

ಇದಕ್ಕೆ ಉತ್ತರಿಸಿದ ಅವರು ‘ಮೊದಲು ಟೀಂ ಇಂಡಿಯಾ ಫೈನಲ್ ಗೆ ಬರಲಿ. ನಾವು ಇನ್ನೊಂದು ಪಂದ್ಯ ಗೆಲ್ಲಬೇಕು. ಆಗ ಫೈನಲ್ ಗೆ ಯಾವ ತಂಡವೇ ಬರಲಿ, ನಾವು ಸೋಲಿಸುತ್ತೇವೆ. ಈ ಸಲ ಕಪ್ ನಾವೇ ಗೆಲ್ಲೋದು. ನಾವು ಸ್ವಲ್ಪ ಆಕ್ರಮಣಕಾರೀ ಆಟವಾಡಬೇಕಿದೆ. ಅದನ್ನು ನಾವು ಮಾಡುತ್ತೇವೆ. ನಾವು ಮತ್ತೊಮ್ಮೆ ಕಪ್ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ. ಸೂರ್ಯಕುಮಾರ್ ಹೇಳಿದ್ದು ಅವರ ಅಭಿಪ್ರಾಯ. ಫೈನಲ್ ನಲ್ಲಿ ನಾವು ನೋಡ್ಕೊಳ್ತೇವೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒಬ್ಬರನ್ನೊಬ್ಬರು ನೋಡಿ ಎಂಥಾ ಖುಷಿ ವಿಡಿಯೋ ನೋಡಿ

ಕೊಹ್ಲಿ, ರೋಹಿತ್ ಆಡುವ ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ ಲೈವ್ ಎಲ್ಲಿ ನೋಡಬೇಕು

ಫಿಟ್ ಆಗಿದ್ರೂ ನನ್ನ ಯಾಕೆ ಕಡೆಗಣಿಸ್ತಿದ್ದೀರಿ: ಆಯ್ಕೆ ಸಮಿತಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೊಹಮ್ಮದ್ ಶಮಿ

ಬೆಳ್ಳಂ ಬೆಳಿಗ್ಗೆ ಆಸ್ಟ್ರೇಲಿಯಾಗೆ ಹೊರಟ ರೋಹಿತ್ ಶರ್ಮಾ, ಕೊಹ್ಲಿ: ಬೀಳ್ಕೊಡಲು ಬಂದ ಫ್ಯಾನ್ಸ್ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments