Publish Date: Sat, 04 Jan 2020 (09:30 IST)
Updated Date: Sat, 04 Jan 2020 (09:33 IST)
ಮೊಹಾಲಿ: ಟೀಂ ಇಂಡಿಯಾದ ಯುವ ಆಟಗಾರ, 19 ರ ವಯೋಮಿತಿಯೊಳಗಿನ ತಂಡದ ನಾಯಕರೂ ಆಗಿರುವ ಶಬ್ನಂ ಗಿಲ್ ರಣಜಿ ಪಂದ್ಯದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.
ಪಂಜಾಬ್ ಮತ್ತು ದೆಹಲಿ ನಡುವೆ ಮೊಹಾಲಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಶಬ್ನಂ 10 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿದರು ಎಂದು ಭಾವಿಸಿ ಅಂಪಾಯರ್ ಮೊಹಮ್ಮದ್ ರಫಿ ಔಟ್ ತೀರ್ಪು ನೀಡಿದರು. ಆದರೆ ಈ ಬಗ್ಗೆ ಅಸಮಾಧಾನಗೊಂಡ ಶಬ್ನಂ ಅಂಪಾಯರ್ ಜತೆ ವಾಗ್ವಾದ ನಡೆಸಿದರು.
ಕೆಲ ಹೊತ್ತಿನ ಬಳಿಕ ಈ ವಾಗ್ವಾದ ಮುಂದುವರಿಯಿತು. ಬಳಿಕ ಅಂಪಾಯರ್ ರಫಿ ಸ್ಕ್ವೇರ್ ಲೆಗ್ ಅಂಪಾಯರ್ ಜತೆ ಚರ್ಚಿಸಿ ತೀರ್ಪು ವಾಪಸ್ ಪಡೆದರು. ಬಳಿಕ ಆಟ ಮುಂದುವರಿಯಿತು. ಆದರೆ ಈ ಘಟನೆಗೆ ಯುವ ಕ್ರಿಕೆಟಿಗನಿಗೆ ಶಿಕ್ಷೆಯಾಗುವ ಸಾಧ‍್ಯತೆಯಿದೆ.