Publish Date: Thu, 21 Nov 2019 (09:09 IST)
Updated Date: Thu, 21 Nov 2019 (09:12 IST)
ಬೆಂಗಳೂರು: ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂದಿನಿಂದ ಸೂಪರ್ ಲೀಗ್ ಹಂತದ ಪಂದ್ಯಗಳು ಆರಂಭವಾಗಲಿದ್ದು, ಕರ್ನಾಟಕ ತಂಡಕ್ಕೆ ತಮಿಳುನಾಡು ಎದುರಾಳಿಯಾಗಲಿದೆ.
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಮನೀಶ್ ಪಾಂಡೆ ನೇತೃತ್ವದ ರಾಜ್ಯ ತಂಡ ಇಂದೂ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಕರ್ನಾಟಕ ಸೂಪರ್ ಲೀಗ್ ಹಂತದಲ್ಲಿ ಇಂದು ತಮಿಳುನಾಡು, ನವಂಬರ್ 2 ರಂದು ಜಾರ್ಖಂಡ್, ನವಂಬರ್ 24 ರಂದು ಪಂಜಾಬ್ ವಿರುದ್ಧ ಮತ್ತು ನವಂಬರ್ 25 ರಂದು ಮುಂಬೈ ವಿರುದ್ಧ ಸೆಣಸಲಿದೆ. ಈ ಎಲ್ಲಾ ಪಂದ್ಯಗಳೂ ಸೂರತ್ ನಲ್ಲಿ ನಡೆಯಲಿವೆ.
ರಾಜ್ಯ ತಂಡಕ್ಕೆ ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್, ಮನೀಶ್ ಪಾಂಡೆ, ದೇವದತ್ತ ಪಡಿಕ್ಕಲ್ ಪ್ರಮುಖ ಆಟಗಾರರಲಿದ್ದಾರೆ. ಹೀಗಾಗಿ ಎದುರಾಳಿಗಳಿಗೆ ಕರ್ನಾಟಕವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಲೀಗ್ ನಿಂದಲೇ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡಿರುವ ರಾಜ್ಯ ತಂಡ ಆಡಿದ 6 ಪಂದ್ಯಗಳ ಪೈಕಿ 5 ರಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ.