Select Your Language

Notifications

webdunia
webdunia
webdunia
webdunia

ಭಾರತ-ಬಾಂಗ್ಲಾ ಹೊನಲು ಬೆಳಕು ಟೆಸ್ಟ್: ನಾಲ್ಕು ದಿನದ ಟಿಕೆಟ್ ಸೋಲ್ಡ್ ಔಟ್

ಭಾರತ-ಬಾಂಗ್ಲಾ ಹೊನಲು ಬೆಳಕು ಟೆಸ್ಟ್: ನಾಲ್ಕು ದಿನದ ಟಿಕೆಟ್ ಸೋಲ್ಡ್ ಔಟ್
ಕೋಲ್ಕೊತ್ತಾ , ಬುಧವಾರ, 20 ನವೆಂಬರ್ 2019 (09:32 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಮೊದಲ ಹೊನಲು ಬೆಳಕು ಟೆಸ್ಟ್ ಪಂದ್ಯದ ಮೊದಲ ನಾಲ್ಕು ದಿನದ ಎಲ್ಲಾ ಟಿಕೆಟ್ ಗಳು ಮಾರಾಟವಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.


ಜನರನ್ನು ಟೆಸ್ಟ್ ಕ್ರಿಕೆಟ್ ನತ್ತ ಆಕರ್ಷಿಸುವ ಸಲುವಾಗಿಯೇ ಹೊನಲು ಬೆಳಕು ಟೆಸ್ಟ್ ಪಂದ್ಯ ಆಯೋಜಿಸಲಾಗುತ್ತಿದೆ. ಈ ಪಂದ್ಯಕ್ಕೆ ಜನರನ್ನು ಮೈದಾನದತ್ತ ಆಕರ್ಷಿಸುವುದೇ ಒಂದು ಸವಾಲು ಎಂದು ಗಂಗೂಲಿ ಈ ಮೊದಲು ಹೇಳಿದ್ದರು.

ಇದೀಗ ಮೊದಲ ನಾಲ್ಕು ದಿನದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ ಎಂದು ಪ್ರಕಟಿಸಿದ್ದಾರೆ. ಎಲ್ಲಾ ಟಿಕೆಟ್ ಗಳು ಮಾರಾಟವಾಗಿರುವುದು ನಮಗೆ ಸಂತಸ ನೀಡಿದೆ ಎಂದು ಗಂಗೂಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಗಲು ರಾತ್ರಿ ಟೆಸ್ಟ್ ಪಂದ್ಯದಿಂದ ಟೆಸ್ಟ್ ಕ್ರಿಕೆಟ್ ಉದ್ದಾರವಾಗದು ಎಂದ ರಾಹುಲ್ ದ್ರಾವಿಡ್