Select Your Language

Notifications

webdunia
webdunia
webdunia
webdunia

ಉಜ್ಜೈನಿಯ ಮಹಾಕಾಳೇಶ್ವರನ ಮೊರೆ ಹೋದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

ರವಿಶಾಸ್ತ್ರಿ
ಮುಂಬೈ , ಮಂಗಳವಾರ, 19 ನವೆಂಬರ್ 2019 (09:26 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ದೈವಭಕ್ತ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈಗಲೂ ಬಿಡುವಾದಾಗ ತಮ್ಮ ತವರು ದ.ಕನ್ನಡ ಜಿಲ್ಲೆಯ ಬನಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ.


ಇದೀಗ ನವಂಬರ್ 22 ರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆಯಲಿದ್ದು, ಆ ಐತಿಹಾಸಿ ಪಂದ್ಯ ಯಶಸ್ವಿಯಾಗಲೆಂದು ಉಜ್ಜೈನಿಯ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.

 ಇದೇ ಮೊದಲ ಬಾರಿಗೆ ಭಾರತ ತಂಡ ಪಿಂಕ್ ಬಾಲ್ ನಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದು ಇತಿಹಾಸ ನಿರ್ಮಿಸಲು ರವಿಶಾಸ್ತ್ರಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಪಂದ್ಯವಾಡುವ ಮಯಾಂಕ್ ಅಗರ್ವಾಲ್ ಕನಸು ಸದ್ಯಕ್ಕೆ ಈಡೇರದು! ಕಾರಣವೇನು ಗೊತ್ತಾ?