Select Your Language

Notifications

webdunia
webdunia
webdunia
webdunia

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

Sanju Samson

Krishnaveni K

ಮುಂಬೈ , ಸೋಮವಾರ, 25 ಆಗಸ್ಟ್ 2025 (10:42 IST)
Photo Credit: X
ಮುಂಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಶುಭಮನ್ ಗಿಲ್ ರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು ಎನ್ನಲಾಗಿತ್ತು. ಆದರೆ ಈಗ ಕಾಮೆಂಟ್ ಮಾಡುವವರಿಗೆ ಸಂಜು ಸ್ಯಾಮ್ಸನ್ ತಕ್ಕ ತಿರುಗೇಟು ನೀಡಿದ್ದಾರೆ.

ಕೇರಳ ಕ್ರಿಕೆಟ್ ಲೀಗ್ ನಲ್ಲಿ ಕೊಚ್ಚಿ ತಂಡದ ಪರ ಆಡುವ ಸಂಜು ಸ್ಯಾಮ್ಸನ್ ನಿನ್ನೆ 42 ಬಾಲ್ ಗಳಿಂದ ಶತಕ ಸಿಡಿಸಿ ತಮ್ಮ ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಹೊಡೆದ ಈ ಶತಕ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವಾಯಿತು.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಜೊತೆಗೆ ಶುಭಮನ್ ಗಿಲ್ ರನ್ನೂ ಆಯ್ಕೆ ಮಾಡಲಾಗಿದೆ. ಗಿಲ್ ಇರುವ ಕಾರಣ ಸಂಜುಗೆ ಆಡುವ ಬಳಗದಲ್ಲಿ ಸ್ಥಾನ ಸಿಗದು ಎಂದೇ ಹೇಳಲಾಗುತ್ತಿದೆ. ಇದುವರೆಗೆ ಟಿ20 ಸರಣಿಗಳಲ್ಲಿ ಅಭಿಷೇಕ್ ಶರ್ಮಾ ಜೊತೆ ಸಂಜು ಓಪನರ್ ಆಗಿ ಆಡುತ್ತಿದ್ದರು. ಆದರೆ ಗಿಲ್ ಆಯ್ಕೆಯಿಂದ ಅವರ ಸ್ಥಾನಕ್ಕೆ ಕುತ್ತು ಬಂದಿದೆ.

ಈ ನಡುವೆ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕದ ಮೂಲಕ ಟೀಂ ಇಂಡಿಯಾ ಆಡುವ ಬಳಗದಿಂದ ತಮ್ಮನ್ನು ಹೊರಗಿಡುವ ಮೊದಲು ಯೋಚಿಸುವಂತೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್