ಏಕದಿನ ಪಂದ್ಯದಲ್ಲೂ ಅದೇ ಹಾಡು ಅದೇ ರಾಗ: 2 ರನ್‌ಗೆ ಔಟಾದ ರೋಹಿತ್​ ವಿರುದ್ಧ ಭಾರೀ ಆಕ್ರೋಶ

Sampriya
ಗುರುವಾರ, 6 ಫೆಬ್ರವರಿ 2025 (19:57 IST)
Photo Courtesy X
ನಾಗ್ಪುರ: ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ ತಂಡದ​ ರೋಹಿತ್​ ಶರ್ಮಾ ಕಳಪೆ ಆಟ ಮುಂದುವರಿದಿದೆ. ಇಂಗ್ಲೆಂಡ್​ ನೀಡಿದ 249 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತ ಪರ ಆರಂಭಿಕ ಆಟಗಾರನಾಗಿ ಕ್ರೀಸ್‌ಗಿಳಿದ ರೋಹಿತ್​ ಶರ್ಮಾ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು.

ರೋಹಿತ್​ ಶರ್ಮಾ ತಾನು ಎದುರಿಸಿದ 7 ಬಾಲ್​ಗಳಲ್ಲಿ ಕೇವಲ 2 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಸಾಕೀಬ್​ ಮಹ್ಮದ್​ ಬೌಲಿಂಗ್​ನಲ್ಲಿ ಲಿಯಾಮ್​ ಲಿವಿಂಗ್​ಸ್ಟೋನ್​​ಗೆ ಕ್ಯಾಚ್​​ ನೀಡಿ ಮೈದಾನದಿಂದ ಹೊರನಡೆದರು.

ಮಹತ್ವದ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಕೈ ಕೊಟ್ಟ ರೋಹಿತ್​ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿದೆ. ನಾಚಿಕೆ ಆಗಬೇಕು ನಿನಗೆ, ಆದಷ್ಟು ಬೇಗೆ ರಿಟೈರ್​ ಆಗು ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ರು.

ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲೂ ಕಳಪೆ ಫಾರ್ಮ್​​ನಲ್ಲಿದ್ದರು. ತವರು ಹಾಗೂ ವಿದೇಶ ಎರಡೂ ಕಡೆ ರನ್​ಗಳಿಸಲು ಪರದಾಡಿದ್ರು. ಬಾರ್ಡರ್ ಗಾವಾಸ್ಕರ್ ಟ್ರೋಫಿಯಲ್ಲಿ ದಯನೀಯ ವೈಫಲ್ಯ ಕಂಡ ನಂತರ ಇವರು ರಣಜಿ ಕ್ರಿಕೆಟ್​ನಲ್ಲೂ ಫ್ಲಾಪ್​ ಆದರು.

ಕಳೆದ 15 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ ರೋಹಿತ್ ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಇತ್ತೀಚೆಗೆ, ರೋಹಿತ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಗಳಿಸಲು ಹೆಣಗಾಡಿದರು. ಇವರು 3 ಟೆಸ್ಟ್​ಗಳ 5 ಇನ್ನಿಂಗ್ಸ್​ನಲ್ಲಿ ಕೇವಲ 31 ರನ್ ಗಳಿಸಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್ Video

ಪ್ರಸಿದ್ಧ ಕೃಷ್ಣ ರನ್ ಮೆಷಿನ್: ಈತನನ್ನು ಹೇಗೆ ಪ್ರಮುಖ ಬೌಲರ್ ಅಂತ ಟೀಂನಲ್ಲಿ ಇಟ್ಕೊಂಡಿದ್ದಾರೆ

ಮುಂದಿನ ಸುದ್ದಿ
Show comments