Select Your Language

Notifications

webdunia
webdunia
webdunia
webdunia

ವಿಚ್ಛೇದನ ವದಂತಿ ಬೆನ್ನಲ್ಲೇ ಪ್ರೇಮಪಾಠ ಮಾಡಿದ ಯಜ್ವೇಂದ್ರ ಚಹಾಲ್‌, ಕ್ರಿಕೆಟಿಗನ ಪೋಸ್ಟ್‌ನ ಒಳಮರ್ಮವೇನು

India cricketer Yuzvendra Chahal New Post, Yuzvendra Chahal and Dhanashree Verma Divorce Rumours, Dhanashree Verma Love

Sampriya

ಬೆಂಗಳೂರು , ಗುರುವಾರ, 23 ಜನವರಿ 2025 (10:24 IST)
Photo Courtesy X
ಪತ್ನಿ ಧನಶ್ರೀ ವರ್ಮಾ ಅವರೊಂದಿಗಿನ ವಿಚ್ಛೇದನದ ವದಂತಿಗಳ ಬೆನ್ನಲ್ಲೇ ಭಾರತದ ಕ್ರಿಕೆಟಿಗ ಯಜ್ವೇಂದ್ರ ಚಹಾಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನ ಸಂದೇಶವೊಂದು ಭಾರೀ ಕುತೂಹಲವನ್ನು ಮೂಡಿಸುತ್ತಿದೆ.

ಚಾಹಲ್ ಮತ್ತು ಧನಶ್ರೀ ಅವರ ವಿಚ್ಛೇದನದ ಸುತ್ತಲಿನ ವರದಿಗಳು ಈಚೆಗೆ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಕ್ರಿಕೆಟಿಗನ ಪೋಸ್ಟ್‌ನಲ್ಲಿರುವ ಬರಹ ಮತ್ತೇ ಸುದ್ದಿಯಾಗುತ್ತಿದೆ. ‌

ಇದುವರೆಗೆ ವಿಚ್ಚೇಧನದ ಬಗ್ಗೆ ಅಧಿಕೃತವಾಗಿ ಚಾಹಲ್ ಅಥವಾ  ಧನಶ್ರೀ ಅವರು ಹೇಳಿಕೊಂಡಿಲ್ಲ. 2020ರಲ್ಲಿ ಯೂಟ್ಯೂಬರ್, ನೃತ್ಯ ಸಂಯೋಜಕಿ ಮತ್ತು ಡೆಂಟಿಸ್ಟ್ ಆಗಿರುವ ಧನಶ್ರೀ ಅವರನ್ನು ಚಹಾಲ್ ಕೈಹಿಡಿದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಈ ಜೋಡಿ, ಆಗಾಗ ತಮ್ಮ ಪ್ರೀತಿಯ ಕ್ಷಣಗಳನ್ನು ಪೋಸ್ಟ್ ಹಾಕುತ್ತಿದ್ದರು.

ಆದರೆ ಈ ವರ್ಷದ ಆರಂಭದಲ್ಲಿ ಈ ಜೋಡಿಯ ವಿಚ್ಛೇದನ ಸುದ್ದಿ ಭಾರೀ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಇವರಿಬ್ಬರ ಪೋಸ್ಟ್‌ಗಳು ಮತ್ತಷ್ಟು ಕುತೂಹಲವನ್ನು ಮೂಡಿಸುತ್ತಿದೆ.

ಇದೀಗ ಚಾಹಲ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸರಣಿ ಪೋಟೋಗಳನ್ನು ಹಂಚಿಕೊಂಡು, ನಿಜವಾದ ಪ್ರೀತಿ ಅಪರೂಪ. ಹಾಯ್, ನನ್ನ ಹೆಸರು 'ಅಪರೂಪ'," ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Ranji Trophy: ರೋಹಿತ್ ಶರ್ಮಾ, ರಿಷಭ್ ಪಂತ್ ಸೇರಿದಂತೆ ಟೀಂ ಇಂಡಿಯಾ ಸ್ಟಾರ್ ಗಳ ರಣಜಿ ಮ್ಯಾಚ್ ಎಲ್ಲಿ ವೀಕ್ಷಿಸಬೇಕು