ಪೆವಿಲಿಯನ್ ನಲ್ಲಿ ಕೂತು ಯಾರೂ ಮಾಡದ ಕೆಲಸವೊಂದನ್ನು ಮಾಡ್ತಾರೆ ಸಾಯಿ ಸುದರ್ಶನ್

Krishnaveni K
ಮಂಗಳವಾರ, 24 ಜೂನ್ 2025 (10:47 IST)
Photo Credit: X
ಲೀಡ್ಸ್: ಭಾರತ ಕ್ರಿಕೆಟ್ ತಂಡಕ್ಕೆ ನೂತನವಾಗಿ ಎಂಟ್ರಿ ಕೊಟ್ಟಿರುವ ಸಾಯಿ ಸುದರ್ಶನ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಯೊಂದು ಹೊರಬಿದ್ದಿದೆ. ಸಾಯಿ ಸುದರ್ಶನ್ ತಂಡದಲ್ಲಿ ಯಾವ ಆಟಗಾರನೂ ಮಾಡದ ಕೆಲಸವೊಂದನ್ನು ಪೆವಿಲಿಯನ್ ನಲ್ಲಿ ಕುಳಿತುಕೊಂಡು ಮಾಡ್ತಾರೆ. ಅದೇನು ಗೊತ್ತಾ?

ಈ ಬಾರಿ ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಗರಿಷ್ಠ ರನ್ ಸ್ಕೋರರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಸಾಯಿ ಸುದರ್ಶನ್ ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಪಂದ್ಯದಲ್ಲೇ ಮ್ಯಾನೇಜ್ ಮೆಂಟ್ ಅವರಿಗೆ ಆಡುವ ಅವಕಾಶವನ್ನೂ ನೀಡಿದೆ. ಆದರೆ ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಸಾಯಿ ಎರಡನೇ ಇನಿಂಗ್ಸ್ ನಲ್ಲಿ 30 ರನ್ ಗಳಿಸಿ ಜಸ್ಟ್ ಪಾಸ್ ಆಗಿದ್ದರು.

ಇದರ ನಡುವೆ ಅವರು ಪ್ಯಾಡ್, ಹೆಲ್ಮೆಟ್ ಹಾಕಿಕೊಂಡು ತಮ್ಮಷ್ಟಕ್ಕೇ ತಾವೇ ವಿಶ್ಲೇಷಿಸುತ್ತಾ ಪುಸ್ತಕವೊಂದರಲ್ಲಿ ಏನೋ ಬರೆದುಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಇದನ್ನು ಹಲವರು ಟ್ರೋಲ್ ಮಾಡಿದ್ದಾರೆ.

ಆದರೆ ಸಾಯಿ ಸುದರ್ಶನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೆ ಮೊದಲು ಐಪಿಎಲ್ ಟೂರ್ನಿಯಲ್ಲೂ ಅವರು ಡಗೌಟ್ ನಲ್ಲಿ ಕುಳಿತು ತಮ್ಮ ಬ್ಯಾಟಿಂಗ್ ಬಗ್ಗೆ ಒಂದು ಪುಸ್ತಕದಲ್ಲಿ ನೋಟ್ ಮಾಡಿಕೊಳ್ಳುತ್ತಿದ್ದರು. ಈ ಮೂಲಕ ತಮ್ಮ ತಪ್ಪುಗಳೇನು, ಎದುರಾಳಿಗಳ ರಣತಂತ್ರ ಹೇಗಿರುತ್ತದೆ ಎಂಬುದನ್ನೆಲ್ಲಾ ಪುಸ್ತದಲ್ಲಿ ಬರೆದು ಅದಕ್ಕೆ ತಕ್ಕಂತೆ ಆಡಲು ಪ್ರಯತ್ನಿಸುತ್ತಾರಂತೆ. ಇದುವರೆಗೆ ತಂಡದ ಕೋಚ್ ಗಳು ಈ ರೀತಿ ನೋಟ್ ಮಾಡಿಕೊಳ್ಳುವುದನ್ನು ನೋಡಿರಬಹುದು. ಆದರೆ ಆಟಗಾರರು ಈ ರೀತಿ ಮಾಡುವುದು ತೀರಾ ವಿರಳ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ದೈತ್ಯ ಬ್ಯಾಟರ್‌ ಕ್ರೀಸ್‌ ಗೇಲ್ಸ್‌ ಸಿಕ್ಸರ್‌ ದಾಖಲೆಯನ್ನು ಉಡೀಸ್‌ ಮಾಡಿದ ವೈಭವ್‌ ಸೂರ್ಯವಂಶಿ

IPL 2026: ಎಲಿಮಿನೇಟರ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಸನ್‌ರೈಸರ್ಸ್‌: ರಾಯಲ್ಸ್‌ಗೆ ಆರಂಭಿಕ ಆಘಾತ

IPL 2026: ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿಗೆ ಮಾಜಿ ಮಾಲೀಕ ವಿಜಯ್‌ ಮಲ್ಯರಿಂದ ವಿಶ್‌

ಅಬ್ ಕೀ ಬಾರ್ ಕೊಹ್ಲಿ ಕೀ ಸರ್ಕಾರ್ ಎಂದ ಫ್ಯಾನ್ಸ್: ವಿರಾಟ್ ಕೊಹ್ಲಿ ರಿಯಾಕ್ಷನ್ ತಪ್ಪದೇ ನೋಡಿ Video

ನಾನೇನೂ ಮಾಡಿಲ್ಲ.. ಬೇಸರದಲ್ಲಿ ಕೂತಿದ್ದ ಟಿಮ್ ಡೇವಿಡ್: ಆರ್ ಸಿಬಿ ಆಟಗಾರರು ಮಾಡಿದ್ದೇನು Video

ಮುಂದಿನ ಸುದ್ದಿ
Show comments