Sachin Tendulkar: ಜಮ್ಮು ಕಾಶ್ಮೀರದಲ್ಲಿ ರಸ್ತೆ ಬದಿ ಕ್ರಿಕೆಟ್ ಆಡಿದ ಸಚಿನ್ ತೆಂಡುಲ್ಕರ್

Krishnaveni K
ಗುರುವಾರ, 22 ಫೆಬ್ರವರಿ 2024 (11:38 IST)
Photo Courtesy: Twitter
ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ರಸ್ತೆ ಬದಿ ಗಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಕಳೆದ ಎರಡು ದಿನಗಳಿಂದ ಕುಟುಂಬ ಸಮೇತ ಸಚಿನ್ ಜಮ್ಮು ಪ್ರವಾಸದಲ್ಲಿದ್ದಾರೆ.

ಕಾರಿನಲ್ಲಿ ಸಾಗುವಾಗ ರಸ್ತೆ ಬದಿ ಕ್ರಿಕೆಟ್ ಆಡುತ್ತಿದ್ದ ಗುಂಪೊಂದನ್ನು ನೋಡಿ ಕಾರು ನಿಲ್ಲಿಸಿದ ಸಚಿನ್ ಅವರೊಂದಿಗೆ ತಾವೂ ಒಂದು ಓವರ್ ಆಡಿದ್ದಾರೆ. ವಿಶೇಷವೆಂದರೆ ಕೊನೆಯ ಎಸೆತದಲ್ಲಿ ನೀವು ಈಗ ನನ್ನನ್ನು ಔಟ್ ಮಾಡಬೇಕು ಎಂದ ಸಚಿನ್ ಬ್ಯಾಟ್ ಉಲ್ಟಾ ಹಿಡಿದು ಬ್ಯಾಟಿಂಗ್ ಮಾಡಿ ಚಮಕ್ ಕೊಟ್ಟಿದ್ದಾರೆ. ಆದರೆ ಕೊನೆಗೂ ಕ್ರಿಕೆಟ್ ದಿಗ್ಗಜನನ್ನು ಔಟ್ ಮಾಡಲು ಸಾಧ‍್ಯವಾಗಲೇ ಇಲ್ಲ. ಸಚಿನ್ ಗಲ್ಲಿ ಕ್ರಿಕೆಟ್ ಆಡುವುದನ್ನು ನೋಡಿದ ನೆಟ್ಟಿಗರು ದೇವರು ಭೂಲೋಕದ ಸ್ವರ್ಗ(ಕಾಶ್ಮೀರವನ್ನು ಭೂಲೋಕದ ಸ್ವರ್ಗ ಎನ್ನುತ್ತಾರೆ) ದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಬಳಿಕ ಅಲ್ಲಿದ್ದವರ ಕುಶಲ ವಿಚಾರಿಸಿ ಎಲ್ಲರೊಂದಿಗೆ ಸೆಲ್ಫೀ ತೆಗೆದುಕೊಂಡು ಅಲ್ಲಿಂದ ತೆರಳಿದ್ದಾರೆ. ಪತ್ನಿ ಅಂಜಲಿ ಜೊತೆ ಸಚಿನ್ ಜಮ್ಮು ಕಾಶ್ಮೀರ ಪ್ರವಾಸ ಮಾಡುತ್ತಿದ್ದಾರೆ. ಮೊನ್ನೆ ಇಲ್ಲಿನ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿ ಅಚ್ಚರಿಗೊಳಿಸಿದ್ದರು. ಅಲ್ಲದೆ, ಇಲ್ಲಿಗೆ ತೆರಳಲು ವಿಮಾನದಲ್ಲಿ ಎಕಾನಮಿ ಕ್ಲಾಸ್ ನಲ್ಲಿ ಕುಳಿತು ಸಹ ಪ್ರಯಾಣಿಕರಿಗೆ ಅಚ್ಚರಿ ನೀಡಿದ್ದರು.

ಕಾಶ್ಮೀರ ಕೇಸರಿಗೆ ಹೆಸರುವಾಸಿ. ಹೀಗಾಗಿ ಇಲ್ಲಿನ ಕೇಸರ್ ಶಾಪ್ ಒಂದಕ್ಕೆ ಭೇಟಿ ನೀಡಿ ಖರೀದಿ ಮಾಡಿದ್ದಾರೆ. ಸ್ಥಳೀಯರೊಂದಿಗೆ ಸಾಮಾನ್ಯರಂತೇ ಕಾಲ ಕಳೆಯುತ್ತಿರುವ ಸಚಿನ್ ತಮ್ಮ ಬ್ರೇಕ್ ಅವಧಿಯನ್ನು ಎಂಜಾಯ್ ಮಾಡುತ್ತಿದ್ದಾರಲ್ಲದೆ, ಇತರರಿಗೂ ಕಾಶ್ಮೀರಕ್ಕೆ ಬರಲು ಪ್ರೇರೇಪಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮತ್ತೊಂದು ವಿಶ್ವದಾಖಲೆಯ ಹೊಸ್ತಿಲಲ್ಲಿ ರೋಕೊ ಜೋಡಿ: ಸಚಿನ್‌–ದ್ರಾವಿಡ್‌ ದಾಖಲೆಗೆ ಕುತ್ತು

ಸ್ಮೃತಿ ಮಂಧಾನಗೆ ಚೀಟ್ ಮಾಡಿ ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡ್ತಿದ್ರಾ ಪಾಲಾಶ್ ಮುಚ್ಚಲ್: ವೈರಲ್ ಪೋಸ್ಟ್

ಒಂದೇ ತಿಂಗಳಲ್ಲಿ ಭಾರತ ಮಹಿಳೆಯರಿಂದ ಮೂರನೇ ವಿಶ್ವಕಪ್: ಭಾರತ ಈಗ ಕಬಡ್ಡಿ ಚಾಂಪಿಯನ್

IND vs SA: ಎರಡನೇ ಟೆಸ್ಟ್ ಸೋಲುವ ಭೀತಿಯಲ್ಲಿ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments