Publish Date: Thu, 24 Feb 2022 (16:40 IST)
Updated Date: Thu, 24 Feb 2022 (16:42 IST)
ಮುಂಬೈ: ಅನಧಿಕೃತವಾಗಿ ತಮ್ಮ ಕೆಲವು ಜಾಹೀರಾತುಗಳಲ್ಲಿ ತಮ್ಮ ಫೋಟೋ, ವಿಡಿಯೋ ಬಳಕೆಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾಗಳಲ್ಲಿ ಕೆಲವು ಪಾನ್, ಗುಟ್ಕಾ ಜಾಹೀರಾತುಗಳಲ್ಲಿ ಅನಧಿಕೃತವಾಗಿ ನನ್ನ ಫೋಟೋ ಬಳಕೆಯಾಗುತ್ತಿರುವುದನ್ನು ಗಮನಿಸಿದ್ದೇನೆ. ನಾನು ಯಾವತ್ತೂ ಮದ್ಯಪಾನ, ಗುಟ್ಕಾ, ಜೂಜಾಟಗಳ ಜಾಹೀರಾತುಗಳನ್ನು ನಾನು ಪ್ರಚಾರ ಮಾಡಲ್ಲ ಎಂದಿದ್ದಾರೆ.
ಇಂತಹ ಆರೋಗ್ಯಕ್ಕೆ, ಸಮಾಜಕ್ಕೆ ಹಾನಿಕಾರಕವಾದ ಜಾಹೀರಾತುಗಳಲ್ಲಿ ನನ್ನ ಫೋಟೋ ಬಳಕೆಯಾಗುತ್ತಿರುವುದು ಖೇದವುಂಟುಮಾಡಿದೆ. ಇದರ ಬಗ್ಗೆ ನನ್ನ ಕಾನೂನು ತಜ್ಞರೊಂದಿಗೆ ಮಾತನಾಡಿದ್ದೇನೆ. ಇವುಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದ್ದೇನೆ ಎಂದು ಸಚಿನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.