Select Your Language

Notifications

webdunia
webdunia
webdunia
webdunia

ಅಂದಿನ ಆ ಮುಗ್ದ ಹುಡುಗನಿಂದ, ಇಂದು ‘ವಿರಾಟ’ ಶತಕ: ಸಚಿನ್ ಭಾವುಕ ಮಾತು

ಅಂದಿನ ಆ ಮುಗ್ದ ಹುಡುಗನಿಂದ, ಇಂದು ‘ವಿರಾಟ’ ಶತಕ: ಸಚಿನ್ ಭಾವುಕ ಮಾತು
ಮುಂಬೈ , ಬುಧವಾರ, 15 ನವೆಂಬರ್ 2023 (21:09 IST)
Photo Courtesy: Twitter
ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 50 ನೇ ಶತಕ ಸಿಡಿಸಿದ್ದಾರೆ.

ಈ ಮೂಲಕ ಸಚಿನ್ ತೆಂಡುಲ್ಕರ್ ಅವರ ಅತ್ಯಧಿಕ ಏಕದಿನ ಶತಕಗಳ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೂ ಸಚಿನ್ ಎದುರುಗಡೆಯೇ ವಿರಾಟ್ ಈ ದಾಖಲೆ ಮಾಡಿದ್ದು ವಿಶೇಷ.

ತಮ್ಮ ವಿಶ್ವ ದಾಖಲೆಯನ್ನು ಮುರಿದ ವಿರಾಟ್ ಬಗ್ಗೆ ಸಚಿನ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ನುಡಿ ಬರೆದಿದ್ದಾರೆ. ‘ಮೊದಲ ಬಾರಿಗೆ ಡ್ರೆಸ್ಸಿಂಗ್ ರೂಂನಲ್ಲಿ ಭೇಟಿಯಾದಾಗ ತಂಡದ ಇತರ ಆಟಗಾರರು ನನ್ನ ಕಾಲಿಗೆ ಬೀಳಬೇಕು ಎಂದು ನಿನ್ನನ್ನು ಪ್ರಾಂಕ್ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ನೀನು ನಿನ್ನ ಶೈಲಿ ಮತ್ತು ಕಲೆಗಾರಿಕೆಯಿಂದ ನನ್ನ ಹೃದಯ ತಟ್ಟಿದೆ. ಅಂದಿನ ಚಿಕ್ಕ ಹುಡುಗ ಇಂದು ‘ವಿರಾಟ’ನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಸಂತೋಷವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಕೊಹ್ಲಿ, ಶ್ರೇಯಸ್ ಶತಕದ ಅಬ್ಬರದಿಂದ ಬೃಹತ್ ಮೊತ್ತ ಪೇರಿಸಿದ ಟೀಂ ಇಂಡಿಯಾ