ಕೋಲ್ಕೊತ್ತಾ: ಐಸಿಸಿ ಟೂರ್ನಿಗಳಲ್ಲಿ ದ.ಆಫ್ರಿಕಾ ಲೀಗ್ ಹಂತದಲ್ಲಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ನಾಕೌಟ್ ಹಂತದಲ್ಲಿ ಮುಂದುವರಿಸುವ ಚಾಳಿ ಹೊಂದಿದೆ.
ಇದೇ ಕಾರಣಕ್ಕೆ ಆಫ್ರಿಕನ್ನರನ್ನು ಚೋಕರ್ಸ್ ಎಂದು ತಮಾಷೆ ಮಾಡಲಾಗುತ್ತದೆ. ಇದೀಗ ಭಾರತದ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯಕ್ಕೆ ಮುನ್ನ ಆಫ್ರಿಕಾ ನಾಯಕ ಬವುಮಾಗೆ ಇದೇ ಪ್ರಶ್ನೆ ಕೇಳಿದ್ದಕ್ಕೆ ಅವರು ಸಿಟ್ಟು ಮಾಡಿಕೊಂಡಿದ್ದಾರೆ.
ನೀವು ಇದೇ ಮಾತನ್ನು ಭಾರತ ತಂಡ ಸೋತರೆ ಆ ತಂಡಕ್ಕೆ ಹೇಳುವ ಧೈರ್ಯ ಮಾಡುತ್ತೀರಾ? ಎಂದು ಬವುಮಾ ಪತ್ರಿಕಾಗೋಷ್ಠಿಯಲ್ಲಿ ಬೇಸರಿಸಿಕೊಂಡಿದ್ದಾರೆ.