Select Your Language

Notifications

webdunia
webdunia
webdunia
webdunia

ಮೈದಾನದಲ್ಲೇ ಅಶ್ವಿನ್ ಮೇಲೆ ಅಸಮಾಧಾನ ತೋರಿದ ರೋಹಿತ್ ಶರ್ಮಾ

Rohit Sharma

Krishnaveni K

ಹೈದರಾಬಾದ್ , ಭಾನುವಾರ, 28 ಜನವರಿ 2024 (09:02 IST)
Photo Courtesy: Twitter
ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಫೀಲ್ಡಿಂಗ್ ವೇಳೆ ರವಿಚಂದ್ರನ್ ಅಶ್ವಿನ್ ಮಿಸ್ ಫೀಲ್ಡಿಂಗ್ ಮಾಡಿದ್ದಕ್ಕೆ ರೋಹಿತ್ ಶರ್ಮಾ ಮೈದಾನದಲ್ಲೇ ಸಿಟ್ಟಿಗೆದ್ದ ಘಟನೆ ನಡೆದಿದೆ.

ಮೂರನೇ ದಿನದಾಟದಲ್ಲಿ ಅಶ್ವಿನ್ ಹಲವು ಬಾರಿ ಮಿಸ್ ಫೀಲ್ಡ್ ಮಾಡಿದರು. ಇದರಿಂದ ಸಿಟ್ಟಿಗೆದ್ದ ರೋಹಿತ್ ಮತ್ತು ಬೌಲರ್ ಜಸ್ಪ್ತೀತ್ ಬುಮ್ರಾ ಅಸಮಾಧಾನ ವ್ಯಕ್ತಪಡಿಸಿದರು. ಒಲೀ ಪೋಪ್ ಹೊಡೆದ ಚೆಂಡನ್ನು ಮಿಡ್ ಆನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಶ್ವಿನ್ ಚೇಸ್ ಮಾಡಿದರು. ಆದರೆ ಡೈವ್ ಹೊಡೆದರೂ ಅವರಿಂದ ಬೌಂಡರಿ ತಡೆಯಲು ಸಾಧ್ಯವಾಗಲಿಲ್ಲ.

ಮತ್ತೊಮ್ಮೆ ಕೆಲವು ಓವರ್ ನಂತರ ಜಡೇಜಾ ಬೌಲಿಂಗ್ ನಲ್ಲಿ ಅಶ್ವಿನ್ ಮತ್ತೆ ಮಿಸ್ ಫೀಲ್ಡ್ ಮಾಡಿ ರನ್ ಬಿಟ್ಟುಕೊಟ್ಟರು. ಇದು ರೋಹಿತ್ ಮತ್ತು ಜಡೇಜಾರ ಅಸಮಾಧಾನಕ್ಕೆ ಗುರಿಯಾಯಿತು. ಅಶ್ವಿನ್ ಇಂಗ್ಲೆಂಡ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಇದುವರೆಗೆ 2 ವಿಕೆಟ್ ಕಬಳಿಸಿದ್ದಾರೆ.

ನಿನ್ನೆಯ ದಿನದಾಟದಲ್ಲಿ ಇಂಗ್ಲೆಂಡ್ ಪರ ಒಲಿ ಪಾಪ್ ಭರ್ಜರಿ ಶತಕ ಸಿಡಿಸಿದರು. 6 ನೇ  ವಿಕೆಟ್ ಗೆ ಶತಕದ ಜೊತೆಯಾಟವಾಡಿ ಭಾರತೀಯರನ್ನು ಕಾಡಿಸಿದರು. ನಿನ್ನೆಯ ದಿನದಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿತ್ತು. ಇದರೊಂದಿಗೆ 126 ರನ್ ಗಳ ಮುನ್ನಡೆ ಸಾಧಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮೊದಲ ಇನಿಂಗ್ಸ್ ಮುನ್ನಡೆ ದಾಟಿದ ಇಂಗ್ಲೆಂಡ್