Select Your Language

Notifications

webdunia
webdunia
webdunia
webdunia

INDvsENG test: ಟೀಂ ಇಂಡಿಯಾಗೆ ಬ್ರೇಕ್ ಕೊಟ್ಟ ಅಶ್ವಿನ್-ಜಡೇಜಾ ಜೋಡಿ

R Ashwin

Krishnaveni K

ಹೈದರಾಬಾದ್ , ಗುರುವಾರ, 25 ಜನವರಿ 2024 (11:48 IST)
Photo Courtesy: Twitter
ಹೈದರಾಬಾದ್: ಟೆಸ್ಟ್ ಕ್ರಿಕೆಟ್ ಎಂದರೆ ಅದರಲ್ಲೂ ಭಾರತೀಯ ಪಿಚ್ ಗಳಲ್ಲಿ ಟೀಂ ಇಂಡಿಯಾಗೆ ಆಪತ್ ಬಾಂಧವರಾಗಿ ಬರುವುದು ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿ ಎಂಬುದು ಇಂದು ಮತ್ತೊಮ್ಮೆ ಸಾಬೀತಾಗಿದೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಪ್ರವಾಸಿಗರು. 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದ್ದಾರೆ. ಮೊದಲ ಅವಧಿಯಲ್ಲಿ ಇಂಗ್ಲೆಂಡ್ ಭಾರತೀಯ ವೇಗಿಗಳ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ವೇಗವಾಗಿ ರನ್ ಗಳಿಸಿದ ಆರಂಭಿಕ ಜೋಡಿ ಸ್ಪಿನ್ನರ್ ಗಳು ಬರುತ್ತಿದ್ದಂತೇ ಕುಸಿಯಿತು.

ಆರಂಭಿಕ ಜಾಕ್ ಕ್ರಾವ್ಲೇ 20, ಬೆನ್ ಡಕೆಟ್ 35 ರನ್ ಗಳಿಸಿ ಔಟಾದರು. ಈ ಪೈಕಿ ಡಕೆಟ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದರು. ಆದರೆ 35 ರನ್ ಗಳಿಸಿದ್ದಾಗ ಅಶ್ವಿನ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಆಗಿ ನಿರ್ಗಮಿಸಬೇಕಾಯಿತು.  ಅವರ ಹಿಂದೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಒಲೀ ಪಾಪ್ ರನ್ನು ಕೇವ 1 ರನ್ ಗಳಿಸಿದ್ದಾಗ ಜಡೇಜಾ ಪೆವಿಲಿಯನ್ ಗೆ ಕಳುಹಿಸಿದರು.

ತಂಡ ಮತ್ತೆ ಇನ್ನೆರಡು ರನ್ ಗಳಿಸುವಷ್ಟರಲ್ಲಿ ಸೆಟ್ ಆಗಿದ್ದ ಆರಂಭಿಕ ಜ್ಯಾಕ್ ವಿಕೆಟ್ ನ್ನೂ ಅಶ್ವಿನ್ ತಮ್ಮದಾಗಿಸಿಕೊಂಡರು. ಈ ಮೂಲಕ ಇಂಗ್ಲೆಂಡ್ ದಿಡೀರ್ ಕುಸಿತಕ್ಕೊಳಗಾಯಿತು. ಆದರೆ ಈ ವೇಳೆ ಜೊತೆಯಾದ ಜೋ ರೂಟ್-ಜಾನಿ ಬೇರ್ ಸ್ಟೋ ಇದೀಗ ಇನಿಂಗ್ಸ್ ಮುನ್ನಡೆಸುತ್ತಿದ್ದಾರೆ. ಈ ಪೈಕಿ ಜೋ ರೂಟ್ 18 ರನ್ ಗಳಿಸಿದ್ದರೆ ಬೇರ್ ಸ್ಟೋ 32 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಭಾರತ ಈ ಪಂದ್ಯಕ್ಕೆ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದು ಸರಿ ಎನಿಸಿತು. ಯಾಕೆಂದರೆ ಇದುವರೆಗೆ ಮೂರೂ ವಿಕೆಟ್ ಸ್ಪಿನ್ನರ್ ಗಳ ಪಾಲಾಗಿದೆ. ಅಶ್ವಿನ್-ಜಡೇಜಾ ಜೋಡಿಯ ಜೊತೆಗೆ ಅಕ್ಷರ್ ಪಟೇಲ್ ಕೂಡಾ ಮುಂದಿನ ಓವರ್ ಗಳಲ್ಲಿ ಭಾರತಕ್ಕೆ ಉಪಯುಕ್ತವೆನಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್