Publish Date: Sat, 09 Jul 2022 (08:30 IST)
Updated Date: Sat, 09 Jul 2022 (08:51 IST)
ಬರ್ಮಿಂಗ್ ಹ್ಯಾಮ್: ರೋಹಿತ್ ಶರ್ಮಾ ಟಿ20 ಫಾರ್ಮ್ಯಾಟ್ ನಲ್ಲಿ ತಾವು ಯಶಸ್ವೀ ನಾಯಕ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.
ಕಿರು ಮಾದರಿಯ ಕ್ರಿಕೆಟ್ ನಲ್ಲಿ ರೋಹಿತ್ ನಾಯಕರಾಗಿ ಇದುವರೆಗೆ ಸತತ 13 ಗೆಲುವು ಪಡೆದಿದ್ದಾರೆ. ಅವರ ವಿನ್ನಿಂಗ್ ಪ್ರತಿಶತ ಶೇ.86 ಕ್ಕಿಂತಲೂ ಹೆಚ್ಚಿದೆ.
ಇಂದೂ ಕೂಡಾ ರೋಹಿತ್ ಪಡೆ ಗೆದ್ದು ಆ ಗೆಲುವಿನ ದಾಖಲೆ ಉಳಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ. ಇಂದು ಗೆದ್ದರೆ ಸರಣಿ ಕೈವಶವಾಗಲಿದೆ.