Publish Date: Mon, 18 Sep 2023 (09:10 IST)
Updated Date: Mon, 18 Sep 2023 (09:11 IST)
ಕೊಲೊಂಬೊ: ಏಷ್ಯಾ ಕಪ್ ಗೆಲುವಿನ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಈಗ ವಿಶ್ವಕಪ್ ಗೆ ತಯಾರಿ ನಡೆಸಲಿದೆ. ವಿಶ್ವಕಪ್ ಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟವಾಗಿದೆ.
ಆದರೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಪಿನ್ ಆಲ್ ರೌಂಡರ್ ಅಕ್ಸರ್ ಪಟೇಲ್ ಗಾಯಗೊಂಡಿದ್ದಾರೆ. ಅಕ್ಸರ್ ಒಂದು ವೇಳೆ ಫಿಟ್ ಆಗದೇ ಹೋದರೆ ಅವರ ಸ್ಥಾನಕ್ಕೆ ಮತ್ತೊಬ್ಬ ಸ್ಪಿನ್ ಆಲ್ ರೌಂಡರ್ ರನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಲಿದೆ.
ಅಂತಹ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಜೊತೆಗೆ ರವಿಚಂದ್ರನ್ ಅಶ್ವಿನ್ ಗೂ ಒಂದು ಅವಕಾಶ ಸಿಗಬಹುದು ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ರೋಹಿತ್ ಈ ಹೇಳಿಕೆ ಅಶ್ವಿನ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಸ್ಟಾರ್ ಸ್ಪಿನ್ನರ್ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲವೆಂದು ಎಷ್ಟೋ ಅಭಿಮಾನಿಗಳಿಗೆ ಬೇಸರವಿತ್ತು. ಆದರೆ ರೋಹಿತ್ ಈ ಹೇಳಿಕೆ ಹೊಸ ಭರವಸೆ ನೀಡಿದೆ.