ಕೊಲೊಂಬೊ: 2023 ನೇ ಸಾಲಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ 8 ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಶ್ರೀಲಂಕಾ ನೀಡಿದ 51 ರನ್ ಗಳ ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ 6.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ರನ್ ಗಳಿಸಿತು. ಇದರೊಂದಿಗೆ ಬಹಳ ದಿನಗಳ ನಂತರ ಬಹುರಾಷ್ಟ್ರಗಳ ಟೂರ್ನಿಯೊಂದರಲ್ಲಿ ಪ್ರಶಸ್ತಿ ಗೆಲ್ಲುವ ಬರ ನೀಗಿಸಿಕೊಂಡಿತು.
ಇಂದು ಆರಂಭಿಕರಾಗಿ ರೋಹಿತ್ ಶರ್ಮಾ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 17 ಎಸೆತಗಳಿಂದ ಅಜೇಯ 23 ರನ್ ಗಳಿಸಿದರೆ ಶುಬ್ಮನ್ ಗಿಲ್ 19 ಎಸೆತಗಳಿಂದ 27 ರನ್ ಗಳಿಸಿದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಇದು ಎರಡನೇ ಏಷ್ಯಾ ಕಪ್ ಗೆಲುವಾಗಿದೆ.