Select Your Language

Notifications

webdunia
webdunia
webdunia
webdunia

ಶ್ರೀಲಂಕಾ-ಟೀಂ ಇಂಡಿಯಾ ನಡುವೆ ಇಂದು ಏಷ್ಯಾ ಕಪ್ ಫೈನಲ್ ಗೆಲ್ಲುವವರು ಯಾರು?

ಶ್ರೀಲಂಕಾ-ಟೀಂ ಇಂಡಿಯಾ ನಡುವೆ ಇಂದು ಏಷ್ಯಾ ಕಪ್ ಫೈನಲ್ ಗೆಲ್ಲುವವರು ಯಾರು?
ಕೊಲೊಂಬೊ , ಭಾನುವಾರ, 17 ಸೆಪ್ಟಂಬರ್ 2023 (08:40 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಕೊಲೊಂಬೋದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.

ಈಗಾಗಲೇ ಉಭಯ ತಂಡಗಳೂ ಸೂಪರ್ ಫೋರ್ ಹಂತದಲ್ಲಿ ಮುಖಾಮುಖಿಯಾಗಿದ್ದವು. ಆಗ ಶ್ರೀಲಂಕಾವನ್ನು ಟೀಂ ಇಂಡಿಯಾ ಸೋಲಿಸಿತ್ತು. ಆದರೂ ಲಂಕಾ ಬೌಲರ್ ಗಳೆದುರು ಟೀಂ ಇಂಡಿಯಾ ಬ್ಯಾಟಿಗರು ತಡಬಡಾಯಿಸಿದ್ದರು.

ಕೊಲೊಂಬೋದಲ್ಲಿ ಇದುವರೆಗೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೇಲುಗೈ ಸಾಧಿಸಿದೆ. ಹೀಗಾಗಿ ಇಂದು ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಖಚಿತ. ಬಾಂಗ್ಲಾದೇಶ ವಿರುದ್ಧದ ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಪ್ರಮುಖ ಆಟಗಾರರು ಇಂದಿನ ಪಂದ್ಯಕ್ಕೆ ಪುನರಾಗಮನವಾಗಲಿದ್ದಾರೆ. ಹಾಗಿದ್ದರೂ ಕಳೆದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಸ್ಥಾನ ಉಳಿಸಿಕೊಂಡರೂ ಅಚ್ಚರಿಯಿಲ್ಲ. ಕಳೆದ ಕೆಲವು ವರ್ಷಗಳಿಂದ ಪ್ರತಿಷ್ಠಿತ ಪ್ರಶಸ್ತಿಯ ಬರ ಎದುರಿಸುತ್ತಿರುವ ಟೀಂ ಇಂಡಿಯಾ ಇಂದು ಅದನ್ನು ತೊಡೆಯುವ ವಿಶ್ವಾಸದಲ್ಲಿದೆ. ಈ ಪಂದ್ಯ ಅಪರಾಹ್ನ 3 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ಶ್ರೀಲಂಕಾ ತಂಡದಲ್ಲೂ ಪ್ರಮುಖ ಸ್ಪಿನ್ನರ್ ಗೆ ಗಾಯ, ನಾಳೆಯ ಪಂದ್ಯಕ್ಕೆ ಇಲ್ಲ