ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅಂತಿಮ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 6 ರನ್ ಗಳಿಂದ ಸೋತಿದೆ.
ಈ ಪಂದ್ಯದಲ್ಲಿ ಭಾರತ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ತನ್ನ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸಿತ್ತು. ಆದರೆ ಬದಲಿ ಆಟಗಾರರಾಗಿ ಅವಕಾಶ ಪಡೆದ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದರು. ಇದರೊಂದಿಗೆ ಭಾರತಕ್ಕೆ ಸೋಲಿನ ಪಾಠ ಸಿಕ್ಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ 49.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಶುಬ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿದರು. ಅವರು ಕೊನೆಯವರೆಗೂ ಉಳಿದಿದ್ದರೆ ಗೆಲ್ಲಬಹುದಾಗಿತ್ತು. ಆದರೆ ಗಿಲ್ 121 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಅಕ್ಸರ್ ಪಟೇಲ್ ಕೊಂಚ ಭರವಸೆ ಮೂಡಿಸಿದರು. ಆದರೆ ಅವರೂ ಕೂಡಾ ರನ್ ಗಳಿಸುವ ಒತ್ತಡದಲ್ಲಿ 43 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.