ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಫೈನಲ್ ನಲ್ಲಿ ನಾಳೆ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯಕ್ಕೆ ಮುನ್ನ ಉಭಯ ತಂಡಗಳಿಗೆ ಪ್ರಮುಖ ಆಟಗಾರರ ಗಾಯದ ಚಿಂತೆ ಶುರುವಾಗಿದೆ. ಟೀಂ ಇಂಡಿಯಾದಲ್ಲಿ ಆಲ್ ರೌಂಡರ್ ಅಕ್ಸರ್ ಪಟೇಲ್ ಗಾಯಗೊಂಡಿದ್ದು, ನಾಳೆಯ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಇನ್ನೊಂದೆಡೆ ಶ್ರೀಲಂಕಾ ತಂಡಕ್ಕೂ ಪ್ರಮುಖ ಸ್ಪಿನ್ನರ್ ಮಹೇಶ ತೀಕ್ಷಣ ಗಾಯ ಚಿಂತೆಗೆ ಕಾರಣವಾಗಿದೆ. ನಾಳೆಯ ಪಂದ್ಯದಲ್ಲಿ ಮಹೇಶ ತೀಕ್ಷಣ ಆಡುವುದಿಲ್ಲ. ಇದುವರೆಗೆ ಆಡಿದ 5 ಪಂದ್ಯಗಳಿಂದ ಮಹೇಶ 8 ವಿಕೆಟ್ ಕಬಳಿಸಿದ್ದರು. ಅವರ ಅನುಪಸ್ಥಿತಿ ಲಂಕಾಗೆ ಕಾಡಲಿದೆ.