ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ನಿನ್ನೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿನೂತನ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ನಾಯಕರೊಬ್ಬರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಹೊಸ ದಾಖಲೆಯನ್ನು ರೋಹಿತ್ ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ರೋಹಿತ್ ಗೆ ಹೊಟ್ಟೆಯ ಆರೋಗ್ಯ ಸಮಸ್ಯೆಯಾಗಿದ್ದರಿಂದ ನಾಯಕರಾಗಿ ಕಣಕ್ಕಿಳಿದಿರಲಿಲ್ಲ.
ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದ್ದರು. ಬಳಿಕ ಬ್ಯಾಟಿಂಗ್ ಗೆ ಬಂದಿದ್ದ ಅವರು 20 ರನ್ ಗಳಿಸಿ ಔಟಾಗಿದ್ದರು. ಈ ಪಂದ್ಯವನ್ನು ಮುಂಬೈ 5 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.