Publish Date: Sat, 15 Apr 2023 (11:02 IST)
Updated Date: Sat, 15 Apr 2023 (11:05 IST)
ಬೆಂಗಳೂರು: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ.
ಆರ್ ಸಿಬಿ ಕಳೆದ ಎರಡು ಪಂದ್ಯಗಳನ್ನು ಸತತವಾಗಿ ಸೋತಿದ್ದು ಇದೀಗ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಂಗ್ ಉತ್ತಮವಾಗಿ ಮಾಡಿದ್ದರೂ ಅದೃಷ್ಟ ಕೈ ಹಿಡಿಯಲಿಲ್ಲ.
ಹೀಗಾಗಿ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳಲಿದೆ. ಈ ಪಂದ್ಯಕ್ಕೆ ಲಂಕಾ ಮೂಲದ ವನಿಂದು ಹಸರಂಗ ತಂಡಕ್ಕೆ ಸೇರ್ಪಡೆಯಾಗಬಹುದು. ವೇಯ್ನ್ ಪರ್ನೆಲ್ ತಂಡದಿಂದ ಹೊರಗುಳಿಯುವ ಸಾಧ‍್ಯತೆಯಿದೆ. ವನಿಂದು ಮೇಲೆ ಆರ್ ಸಿಬಿಗೆ ಅಪಾರ ನಿರೀಕ್ಷೆಯಿದೆ. ಹೀಗಾಗಿ ಪಂದ್ಯ ಗೆಲ್ಲಿಸಿಕೊಡುವಂತಹ ಆಟಗಾರರನ್ನು ಆರ್ ಸಿಬಿ ಕರೆತರಲಿದೆ.