ಮುಂಬೈ: ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗಿರುವ ಜಸ್ಪ್ರೀತ್ ಬುಮ್ರಾ ಮತ್ತೆ ಕ್ರಿಕೆಟ್ ಗೆ ಮರಳುವುದು ಯಾವಾಗ ಎಂಬ ಪ್ರಶ್ನೆಗೆ ಎದುರಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಬುಮ್ರಾ ಭಾಗಿಯಾಗುತ್ತಿಲ್ಲ. ಇದಾದ ಬಳಿಕ ಏಕದಿನ ವಿಶ್ವಕಪ್ ಬರಲಿದೆ. ಈ ವೇಳೆ ಬುಮ್ರಾ ತಂಡಕ್ಕೆ ವಾಪಸ್ ಆಗಬಹುದೇ ಎಂಬ ಪ್ರಶ್ನೆಗಳಿವೆ.
ಈ ಬಗ್ಗೆ ಬಿಸಿಸಿಐ ಮೂಲಗಳಿಂದ ಸುಳಿವು ಸಿಕ್ಕಿದೆ. ಬುಮ್ರಾ ಸದ್ಯಕ್ಕೆ ಫಿಟ್ನೆಸ್ ಮರಳಿ ಪಡೆಯಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ವಿಶ್ವಕಪ್ ವೇಳೆಗೆ ಅವರು ಫಿಟ್ ಆಗುವ ನಿರೀಕ್ಷೆಯಿದೆ ಎಂದಿದೆ ಬಿಸಿಸಿಐ ಮೂಲಗಳು.