ರೋಹಿತ್ ಶರ್ಮಾಗೆ ಕೊಕ್, ಹಾರ್ದಿಕ್ ನಾಯಕ: ಮುಂಬೈ ನೂತನ ನಾಯಕನಿಗೆ ಸಿಗಲಿರುವ ವೇತನವೆಷ್ಟು?

Webdunia
ಶನಿವಾರ, 16 ಡಿಸೆಂಬರ್ 2023 (08:20 IST)
Photo Courtesy: Twitter
ಮುಂಬೈ: ಐಪಿಎಲ್ ನಲ್ಲಿ ಗರಿಷ್ಠ ಟ್ರೋಫಿ ಗೆದ್ದ ಖ್ಯಾತಿಯ ರೋಹಿತ್ ಶರ್ಮಾರನ್ನು ಮುಂಬೈ ನಾಯಕತ್ವದಿಂದ ಕೊಕ್ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯರನ್ನು ನೂತನ ನಾಯಕನಾಗಿ ಆಯ್ಕೆ ಮಾಡಿದೆ.

ಗುಜರಾತ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಮರಳಿ ಟ್ರೇಡಿಂಗ್ ವಿಂಡೋ ಮೂಲಕ ಖರೀದಿ ಮಾಡಿತ್ತು. ಆಗಲೇ ಹಾರ್ದಿಕ್ ರನ್ನು ನಾಯಕರಾಗಿ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ ಎಂದು  ಅಭಿಮಾನಿಗಳು ಅಂದಾಜಿಸಿದ್ದರು. ಮುಂಬೈ ನೂತನ ನಾಯಕ ಹಾರ್ದಿಕ್ 15 ಕೋಟಿ ರೂ. ವೇತನ ಪಡೆಯಲಿದ್ದಾರೆ.

ಅದೀಗ ನಿಜವಾಗಿದೆ. ಯಶಸ್ವೀ ನಾಯಕನಿಗೆ ಕೊಕ್ ನೀಡಿ ನೂತನ ನಾಯಕನಿಗೆ ಪಟ್ಟ ಕಟ್ಟಲಾಗಿದೆ. ರೋಹಿತ್ ಶರ್ಮಾಗೆ ಈಗ 36 ವರ್ಷ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನಾಯಕನಿಗೆ ಅವಕಾಶ ನೀಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ರೋಹಿತ್ ಶರ್ಮಾ 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಇದುವರೆಗೆ ಐಪಿಎಲ್ ನಲ್ಲಿ 5 ಬಾರಿ ಚಾಂಪಿಯನ್ ಆದ ಗರಿಮೆ ರೋಹಿತ್ ರದ್ದು. ಇದೀಗ ಅವರ ನಾಯಕತ್ವ ಕೊನೆಗೊಂಡಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

ಮುಂದಿನ ಸುದ್ದಿ
Show comments