Publish Date: Sun, 19 Sep 2021 (09:13 IST)
Updated Date: Sun, 19 Sep 2021 (09:13 IST)
ಮುಂಬೈ: ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ನಾಯಕರಾಗಿ ರೋಹಿತ್ ಈ ಹಿಂದೆ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದಾಗ ಮಾಡಿದ ದಾಖಲೆಗಳೇ ಅವರಿಗೆ ವರದಾನವಾಗಿದೆ.
ಇದುವರೆಗೆ ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕರಾಗಿ ರೋಹಿತ್ 19 ಗೆಲುವು, 15 ಸೋಲು ಅನುಭವಿಸಿದ್ದಾರೆ. ಒಬ್ಬ ನಾಯಕನಾಗಿ ಟಿ20 ಕ್ರಿಕೆಟ್ ನಲ್ಲಿ ಶತಕ ಭಾರಿಸಿದ ಅದರಲ್ಲೂ ಎರಡೆರಡು ಬಾರಿ ಈ ಸಾಧನೆ ಮಾಡಿದ ದಾಖಲೆ ಅವರದ್ದಾಗಿದೆ. ಇನ್ನು, ಎರಡು ಬಾರಿ ಎದುರಾಳಿಯನ್ನು ಟಿ20 ಸರಣಿಯಲ್ಲಿ ವೈಟ್ ವಾಶ್ ಮಾಡಿದ ಸಾಧನೆ ಮಾಡಿದ್ದಾರೆ. ಒಬ್ಬ ಬ್ಯಾಟ್ಸ್ ಮನ್ ಆಗಿ, ನಾಯಕನಾಗಿ ಎರಡೂ ಪಾತ್ರಗಳಲ್ಲಿ ಅವರು ಟಿ20 ಕ್ರಿಕೆಟ್ ನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲದೆ, ಐಪಿಎಲ್ ನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸತತವಾಗಿ ಚಾಂಪಿಯನ್ಸ್ ಪಟ್ಟಕ್ಕೇರಿಸಿದ ಪರಿ ನೋಡಿ ಎಷ್ಟೋ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಅವರೇ ಟೀಂ ಇಂಡಿಯಾ ಟಿ20 ತಂಡಕ್ಕೂ ನಾಯಕರಾಗಬೇಕು ಎಂದು ಬಯಸಿದ್ದರು. ಅದೆಲ್ಲಾ ನಿಜವಾಗುವ ಕಾಲ ಸನ್ನಿಹಿತವಾಗಿದೆ.