ಐಪಿಎಲ್ ನಲ್ಲೂ ರೋಹಿತ್ ಶರ್ಮಾ ನಾಯಕರಾಗಿ ಕಮ್ ಬ್ಯಾಕ್ ಮಾಡ್ತಾರಾ

Krishnaveni K
ಸೋಮವಾರ, 8 ಜುಲೈ 2024 (08:52 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಆದ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೀಗ ರೋಹಿತ್ ಮುಂದಿನ ಐಪಿಎಲ್ ಗೆ ಮತ್ತೆ ನಾಯಕನಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.

ಟಿ20 ವಿಶ್ವಕಪ್ ಗಿಂತ ಮೊದಲು ರೋಹಿತ್ ಶರ್ಮಾರಂತಹವರು ಕಿರು ಮಾದರಿಯ ಆಟವಾಡಿದ್ದು ಸಾಕು ಎಂದು ನಿರ್ಧರಿಸಿ ಅವರನ್ನು ಸೈಡ್ ಲೈನ್ ಮಾಡಲು ನಾಯಕತ್ವವನ್ನು ಕಿತ್ತುಕೊಳ್ಳಲಾಗಿತ್ತು. ಆದರೆ ಬಿಸಿಸಿಐ ಮಾತ್ರ ಟಿ20 ವಿಶ್ವಕಪ್ ಗೆ ರೋಹಿತ್ ರನ್ನೇ ನಾಯಕರಾಗಿ ಉಳಿಸಿತು.

ಆಗ ಎಷ್ಟೋ ಮಂದಿ ಈ ನಿರ್ಧಾರವನ್ನು ಪ್ರಶ್ನಿಸಿವರು ಇದ್ದಾರೆ. ರೋಹಿತ್ ಗೆ ವಯಸ್ಸಾಯ್ತು. ಯಾರಾದರೂ ಯುವ ಆಟಗಾರರಿಗೆ ನಾಯಕತ್ವ ನೀಡಬೇಕಿತ್ತು ಎಂದವರೂ ಇದ್ದಾರೆ. ಆದರೆ ರೋಹಿತ್ ನಾಯಕತ್ವದಲ್ಲೇ ಭಾರತ ಕಪ್ ಎತ್ತಿ ಹಿಡಿದಿದ್ದು ಈಗ ಇತಿಹಾಸ.

ಆದರೆ ಇದರ ಬೆನ್ನಲ್ಲೇ ಮುಂದಿನ ಬಾರಿ ಐಪಿಎಲ್ ನಲ್ಲೂ ಮುಂಬೈ ಇಂಡಿಯನ್ಸ್ ಪರ ಅಥವಾ ಬೇರೆ ತಂಡಕ್ಕೆ ರೋಹಿತ್ ನಾಯಕರಾಗಿ ಕಮ್ ಬ್ಯಾಕ್ ಮಾಡಬಹುದು ಎಂಬ ಸುದ್ದಿ ದಟ್ಟವಾಗಿದೆ. ರೋಹಿತ್ ನಾಯಕರಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ರೋಹಿತ್ ಆಟಗಾರನಾಗಿ ಮಾತ್ರವಲ್ಲ, ನಾಯಕನಾಗಿಯೂ ತಾನೊಬ್ಬ ಚಾಣಕ್ಷ್ಯ ಎಂದು ನಿರೂಪಿಸಿದ್ದಾರೆ. ಅದೂ ಅಲ್ಲದೆ ಮುಂಬೈ ಇಂಡಿಯನ್ಸ್ ಹಾರ್ದಿಕ್ ನಾಯಕತ್ವದಲ್ಲಿ ಕಳೆದ ಬಾರಿ ಯಶಸ್ಸು ಪಡೆದಿರಲಿಲ್ಲ. ಹೀಗಾಗಿ ರೋಹಿತ್ ಆಡುವಷ್ಟು ದಿನ ಅವರನ್ನೇ ಮತ್ತೆ ನಾಯಕರಾಗಿ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Viral Video: ರೋಹಿತ್, ಧೋನಿ ನೆನಪಿಸುವಂತೆ ಬ್ಯಾಟಿಂಗ್ ಮಾಡುತ್ತಾನೆ ಈ ಪುಟ್ಟ ಬಾಲಕ

ICC ಮಹಿಳಾ ಕ್ರಿಕೆಟ್ ವಿಶ್ವಕಪ್: ನಿರ್ಣಾಯಕ ಪಂದ್ಯಾದಲ್ಲಿ ಟಾಸ್ ಸೋತ ಭಾರತ

Video: ಬೌಲರ್ ಸುಸ್ತಾಗಿದ್ದಾನೆ ಓಡ್ಬೇಕಾಗಿತ್ತು..: ಸ್ಟಂಪ್ ಮೈಕ್ ನಲ್ಲಿ ಶ್ರೇಯಸ್ ಗೆ ಬೆಂಡೆತ್ತಿದ ರೋಹಿತ್

IND vs AUS: ಏನು ಡೆಡಿಕೇಷನ್ ಗುರೂ.. ಕೈಗೆಲ್ಲಾ ಗಾಯ ಮಾಡಿಕೊಂಡು ಆಡಿದ ರೋಹಿತ್ ಶರ್ಮಾ

IND vs AUS: ಮೈದಾನದಲ್ಲೇ ನಿವೃತ್ತಿಯ ಸೂಚನೆ ನೀಡಿದ್ರಾ ವಿರಾಟ್ ಕೊಹ್ಲಿ: ವೈರಲ್ ಆದ ವಿಡಿಯೋ

ಮುಂದಿನ ಸುದ್ದಿ
Show comments