Select Your Language

Notifications

webdunia
webdunia
webdunia
Sunday, 6 April 2025
webdunia

ಟಿ20 ವಿಶ್ವಕಪ್ ಗೆಲುವಿನ ಬಳಿಕ ಹುಲ್ಲು ತಿಂದಿದ್ದೇಕೆ ರಿವೀಲ್ ಮಾಡಿದ ರೋಹಿತ್ ಶರ್ಮಾ

Rohit Sharma

Krishnaveni K

ಬಾರ್ಬಡೋಸ್ , ಮಂಗಳವಾರ, 2 ಜುಲೈ 2024 (12:15 IST)
ಬಾರ್ಬಡೋಸ್: ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯವನ್ನು ಗೆದ್ದ ಬಳಿಕ ಚಾಂಪಿಯನ್ ಆದ ಖುಷಿಯಲ್ಲಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಿಚ್ ಬಳಿ ಸಾಗಿ ಹುಲ್ಲು ತಿಂದಿದ್ದು ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕಾರಣವೇನೆಂದು ಅವರೀಗ ರಿವೀಲ್ ಮಾಡಿದ್ದಾರೆ.

ಟ್ರೋಫಿ ಜೊತೆಗೆ ಫೋಟೋ ಶೂಟ್ ವೇಳೆ ರೋಹಿತ್ ಶರ್ಮಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಈ ವಿಡಿಯೋದಲ್ಲಿ ರೋಹಿತ್ ಪಿಚ್ ನ ಹುಲ್ಲು ತಿಂದಿದ್ದು ಯಾಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

‘ಯಾವುದೂ ಉದ್ದೇಶಪೂರ್ವಕವಾಗಿರಲಿಲ್ಲ. ನನಗೆ ಆ ಕ್ಷಣದಲ್ಲಿ ಏನು ಅನಿಸಿತೋ ಅದನ್ನು ಮಾಡಿದೆ. ಪಿಚ್ ಬಳಿ ಹೋದಾಗ ಇದೇ ಪಿಚ್ ನಮಗೆ ವಿಶ್ವಕಪ್ ತಂದುಕೊಟ್ಟಿದ್ದು, ಇಲ್ಲಿಯೇ ನಾವು ಆಡಿದ್ದು ಎಂಬ ಭಾವನೆ ಬಂತು. ಈ ಮೈದಾನ, ಪಿಚ್ ನ್ನು ನಾನು ಜೀವಮಾನದಲ್ಲಿ ಮರೆಯಲಾರೆ’ ಎಂದಿದ್ದಾರೆ.

‘ಈ ಪಿಚ್ ನ ತುಣುಕು ಯಾವತ್ತೂ ನನ್ನೊಳಗಿರಲಿ ಎಂಬ ಕಾರಣಕ್ಕೆ ಹುಲ್ಲಿನ ತುಣುಕನ್ನು ಸೇವಿಸಿದೆ. ಇದು ನನ್ನ ಕನಸು ನನಸಾದ ಜಾಗ. ಈ ಜಾಗ ಯಾವತ್ತೂ ನನಗೆ ವಿಶೇಷ. ಇದೇ ಕಾರಣಕ್ಕೆ ಹುಲ್ಲು ಸೇವಿಸಿದೆ’ ಎಂದು ರೋಹಿತ್ ಶರ್ಮಾ ಕಾರಣ ವಿವರಿಸಿದ್ದಾರೆ. ಇನ್ನು, ಈ ಗೆಲುವು ಈಗಲೂ ಕನಸೋ ನನಸೋ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ವಿದಾಯ ಭಾಷಣ: ರೋಹಿತ್ ಶರ್ಮಾರ ಆ ಒಂದು ಕರೆ ಪ್ರಸ್ತಾಪಿಸಿದ ವಾಲ್