Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸೆಹ್ವಾಗ್ ವಿರುದ್ಧ ಕುತಂತ್ರ ಮಾಡಿದ್ದ ಲಂಕಾ ವಿರುದ್ಧ ಒಳ್ಳೆಯತನದಿಂದಲೇ ಮನಗೆದ್ದ ರೋಹಿತ್ ಶರ್ಮಾ

webdunia
ಬುಧವಾರ, 11 ಜನವರಿ 2023 (08:50 IST)
Photo Courtesy: Twitter
ಗುವಾಹಟಿ: ಅದು 2010 ರ ಆಗಸ್ಟ್ 16 ರಂದು ನಡೆದಿದ್ದ ಭಾರತ-ಶ್ರೀಲಂಕಾ ನಡುವಿನ ಏಕದಿನ ಪಂದ್ಯ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ವೀರೇಂದ್ರ ಸೆಹ್ವಾಗ್ ಲಂಕಾ ಮಾಡಿದ ಕುತಂತ್ರದಿಂದಾಗಿ ಶತಕ ತಪ್ಪಿಸಿಕೊಂಡರು.

ಪಂದ್ಯದ 35 ನೇ ಓವರ್ ನಲ್ಲಿ ಭಾರತದ ಗೆಲುವಿಗೆ 5 ರನ್ ಮತ್ತು ಸೆಹ್ವಾಗ್ ಶತಕ ಗಳಿಸಲು ಕೇವಲ 1 ರನ್ ಬೇಕಾಗಿತ್ತು. ಆದರೆ ಲಂಕಾ ಬೌಲರ್ ಸೂರಜ್ ರಣದೀವ್ ಎಸೆದ ಮೊದಲ ಎಸೆತ ಬೈ ಆಗಿ ಭಾರತದ ಖಾತೆ ನಾಲ್ಕು ರನ್ ಸಿಕ್ಕಿತ್ತು. ಮುಂದಿನ ಎರಡು ಎಸೆತಗಳಲ್ಲಿ ಸೆಹ್ವಾಗ್ ರನ್ ಗಳಿಸಲು ವಿಫಲರಾದರು. ಆದರೆ ಐದನೇ ಎಸೆತವನ್ನು ಸಿಕ್ಸರ್ ಸಿಡಿಸಿ ಗೆಲುವು ಮತ್ತು ತಮ್ಮ ಶತಕ ಪೂರ್ತಿ ಮಾಡುತ್ತಿದ್ದರು. ಆದರೆ ಆ ಎಸೆತವನ್ನು ರಣದೀವ್ ಬೇಕೆಂದೇ ನೋ ಬಾಲ್ ಎಸೆದು ಸೆಹ್ವಾಗ್ ಶತಕ ಗಳಿಸದಂತೆ ವಂಚಿಸಿದರು. ಈ ಕುತಂತ್ರ ಮಾಡಿದ ಲಂಕಾ ಸಾಕಷ್ಟು ಟೀಕೆಗೊಳಗಾಗಿತ್ತು.

ಆದರೆ ನಿನ್ನೆ ಅದೇ ಶ್ರೀಲಂಕಾ ನಾಯಕ ದಸುನ್ ಶಣಕ ಕೂಡಾ ಅದೇ ಪರಿಸ್ಥಿತಿಯಲ್ಲಿದ್ದರು. ಲಂಕಾ ಹೇಗಿದ್ದರೂ ಸೋಲು ಕಾಣುತ್ತಿತ್ತು. ಆದರೆ ಪಂದ್ಯದ 50 ನೇ ಓವರ್ ನಡೆಯುತ್ತಿತ್ತು. ಈ ವೇಳೆ ಅವರು 98 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಈ ವೇಳೆ ದಸುನ್ ರನೌಟ್ ಆಗಿದ್ದರು. ಮೊಹಮ್ಮದ್ ಶಮಿ ಬೇಲ್ಸ್ ಎಗರಿಸಿದ್ದರು. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಉದಾರತೆ ಮೆರೆದು ರನೌಟ್ ಅಪೀಲ್ ಮಾಡದೇ ದಸುನ್ ಶತಕ ಗಳಿಸಲು ನೆರವಾದರು. ರೋಹಿತ್ ಈ ವರ್ತನೆಗೆ ಕ್ರೀಡಾ ಲೋಕದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಅಂದು ಸೆಹ್ವಾಗ್ ಗೆ ಲಂಕಾ ಮಾಡಿದ್ದ ವಂಚನೆಯನ್ನೂ ಅಭಿಮಾನಿಗಳು ನೆನಪಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ದಸುನ್ 108, ನಿಸಂಕಾ 72, ಧನಂಜಯ ಡಿ ಸಿಲ್ವಾ 47 ರನ್ ಗಳಿಸಿದರು. ಭಾರತದ ಪರ ಉಮ್ರಾನ್ ಮಲಿಕ್ 3, ಮೊಹಮ್ಮದ್ ಸಿರಾಜ್ 2, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಲಂಕಾ ವಿರುದ್ಧ ‘ಜೋಡೆತ್ತು’ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭರ್ಜರಿ ಆಟ