Publish Date: Sun, 18 Mar 2018 (09:20 IST)
Updated Date: Sun, 18 Mar 2018 (09:23 IST)
ಕೊಲೊಂಬೊ: ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾ ತಮ್ಮ ಲಂಕಾ ಮೂಲದ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ.
ಲಂಕಾ ತಂಡ ಭಾರತಕ್ಕೆ ಬಂದಿದ್ದಾಗ ಆ ದೇಶದ ಅಭಿಮಾನಿ ಮೊಹಮ್ಮದ್ ನೀಲಂ ತಮ್ಮ ತಂದೆಗೆ ಹುಷಾರಿಲ್ಲವೆಂದು ಮರಳಿ ಊರಿಗೆ ಹೋಗಲು ರೋಹಿತ್ ಸಹಾಯ ಮಾಡಿದ ಘಟನೆ ನಿಮಗೆ ನೆನಪಿರಬಹುದು.
ಆಗ ರೋಹಿತ್ ಆ ಅಭಿಮಾನಿಗೆ ವಿಮಾನದ ಟಿಕೆಟ್ ಹಣ ನೀಡಿದ್ದರಲ್ಲದೆ, ತಂದೆಯ ಚಿಕಿತ್ಸೆಗೆ ಹಣ ಸಹಾಯವನ್ನೂ ಮಾಡಿದ್ದರು. ಇದೀಗ ಅದೇ ಅಭಿಮಾನಿಯ ಮನೆಗೆ ರೋಹಿತ್ ಯಾರಿಗೂ ಹೇಳದೇ ದಿಡೀರ್ ಭೇಟಿ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ, ಅವರ ಮನೆಯವರೊಂದಿಗೆ ಸಾಮಾನ್ಯರಂತೇ ಕಳೆದು ತಮ್ಮ ಜೆರ್ಸಿಯೊಂದನ್ನು ಉಡುಗೊರೆ ನೀಡಿದ್ದಾರೆ. ಎಷ್ಟೇ ಆದರೂ ಇಂತಹ ಅಭಿಮಾನಿಗಳಿಂದಾಗಿಯೇ ಅಲ್ಲವೇ ನಮ್ಮಂತಹವರಿಗೆ ಹೆಸರು ಬರುವುದು. ಇವರನ್ನೆಲ್ಲಾ ಮರೆಯಲು ಸಾಧ್ಯವೇ ಎಂದು ನಂತರ ರೋಹಿತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ