Publish Date: Wed, 29 Jun 2022 (11:00 IST)
Updated Date: Wed, 29 Jun 2022 (11:08 IST)
ಲಂಡನ್: ಕೊರೋನಾದಿಂದ ಬಳಲುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುತ್ತಾರಾ ಎನ್ನುವುದು ಇಂದು ಸಂಜೆಯೊಳಗೆ ತೀರ್ಮಾನವಾಗಲಿದೆ.
ರೋಹಿತ್ ಸದ್ಯಕ್ಕೆ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊನ್ನೆಯಷ್ಟೇ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಾವು ಆರಾಮವಾಗಿರುವುದಾಗಿ ಫೋಟೋ ಪ್ರಕಟಿಸಿದ್ದರು.
ಈಗ ರೋಹಿತ್ ಮೊದಲ ಟೆಸ್ಟ್ ನಲ್ಲಿ ಪಾಲ್ಗೊಳ್ಳಬೇಕಾದರೆ ಕೊರೋನಾ ವರದಿ ನೆಗೆಟಿವ್ ಇರಬೇಕು. ಹೀಗಾಗಿ ರೋಹಿತ್ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಇಂದು ಅವರ ಲಭ್ಯತೆ ಬಗ್ಗೆ ತೀರ್ಮಾನವಾಗಲಿದೆ.