Select Your Language

Notifications

webdunia
webdunia
webdunia
webdunia

ರಶ್ಮಿಕಾ, ರೋಹಿತ್, ಗಂಗೂಲಿ ಮೆಗಾ ಬ್ಲಾಕ್ ಬ್ಲಸ್ಟರ್ ಗುಟ್ಟು ಇಂದು ಬಹಿರಂಗ

ರಶ್ಮಿಕಾ, ರೋಹಿತ್, ಗಂಗೂಲಿ ಮೆಗಾ ಬ್ಲಾಕ್ ಬ್ಲಸ್ಟರ್ ಗುಟ್ಟು ಇಂದು ಬಹಿರಂಗ
ಮುಂಬೈ , ಭಾನುವಾರ, 4 ಸೆಪ್ಟಂಬರ್ 2022 (08:10 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನೊಳಗೊಂಡ ಮೆಗಾ ಬ್ಲಾಕ್ ಬ್ಲಸ್ಟರ್ ಪ್ರಾಜೆಕ್ಟ್ ನ ಟ್ರೈಲರ್ ಇಂದು ಅನಾವರಣಗೊಳ್ಳಲಿದೆ.

ಮೆಗಾ ಬ್ಲಾಕ್ ಬ್ಲಸ್ಟರ್ ಅಂದರೆ ಏನು? ಇದು ಸಿನಿಮಾನಾ ಅಥವಾ ಶೋನಾ? ಎಂಬ ಅಭಿಮಾನಿಗಳ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ವಿಶೇಷವೆಂದರೆ ರೋಹಿತ್, ರಶ್ಮಿಕಾ, ಗಂಗೂಲಿ ಮಾತ್ರವಲ್ಲದೆ, ಕಪಿಲ್ ಶರ್ಮಾ, ತ್ರಿಶಾ ಕೃಷ್ಣನ್, ಕಾರ್ತಿ, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ತಾರೆಯರು ಇರುವ ಪೋಸ್ಟರ್ ಒಂದು ಮೊನ್ನೆ ರಿವೀಲ್ ಆಗಿ ಎಲ್ಲರ ತಲೆಗೆ ಹುಳ ಬಿಡಲಾಗಿತ್ತು. ಇದು ಮೀಶೋ ಆಪ್ ನ ಪ್ರಮೋಷನಲ್ ಪೋಸ್ಟ್ ಎಂದು ಗಂಗೂಲಿ ತಪ್ಪಾಗಿ ರಹಸ್ಯ ಬಿಟ್ಟುಕೊಟ್ಟಿದ್ದರು. ಹಾಗಿದ್ದರೂ ಅಧಿಕೃತವಾಗಿ ಈ ಪ್ರಾಜೆಕ್ಟ್ ಏನು ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ಟೀಂ ಇಂಡಿಯಾ ಪರ ರಿಷಬ್ ಔಟ್, ರವಿಚಂದ್ರನ್ ಅಶ್ವಿನ್ ಇನ್?