Publish Date: Tue, 11 Jul 2023 (09:44 IST)
Updated Date: Tue, 11 Jul 2023 (09:46 IST)
ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧ ವಿಂಡ್ಸರ್ ಪಾರ್ಕ್ ನಲ್ಲಿ ಮೊದಲ ಟೆಸ್ಟ್ ಆಡಲಿರುವ ಟೀಂ ಇಂಡಿಯಾ ಪಾಳಯದಲ್ಲಿ ಅಸಮಾಧಾನ ಮನೆ ಮಾಡಿದೆ.
ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸಲು ಬಹುದೂರ ಪ್ರಯಾಣ ಮಾಡಬೇಕಾಗಿರುವುದು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದವರ ಅಸಮಾಧಾನಕ್ಕೆ ಗುರಿಯಾಗಿದೆ.
ಭಾರತೀಯ ಆಟಗಾರರಿಗೆ ಡೊಮಿನಿಕಾದ ಇಂಟರ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಆದರೆ ಇಲ್ಲಿಂದ ಅಭ್ಯಾಸ ನಡೆಸಲು ಮೈದಾನಕ್ಕೆ ಬರಬೇಕಾದರೆ ಬರೋಬ್ಬರಿ ಒಂದು ಗಂಟೆ ಅವಧಿ ಬೇಕಾಗುತ್ತದೆ. ಪ್ರಯಾಣದಲ್ಲೇ ಸುಸ್ತಾದರೆ ಇನ್ನು ಅಭ್ಯಾಸ ನಡೆಸುವುದು ಹೇಗೆ ಎನ್ನುವುದು ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.