Select Your Language

Notifications

webdunia
webdunia
webdunia
webdunia

ಐಸಿಸಿ ಟೀಂ ಇಂಡಿಯಾಗೆ ಅನುಕೂಲ ಮಾಡ್ತಿದೆ ಎಂಬ ಅಫ್ರಿದಿ ಆರೋಪಕ್ಕೆ ರೋಜರ್ ಬಿನ್ನಿ ತಿರುಗೇಟು

ಐಸಿಸಿ ಟೀಂ ಇಂಡಿಯಾಗೆ ಅನುಕೂಲ ಮಾಡ್ತಿದೆ ಎಂಬ ಅಫ್ರಿದಿ ಆರೋಪಕ್ಕೆ ರೋಜರ್ ಬಿನ್ನಿ ತಿರುಗೇಟು
ಮುಂಬೈ , ಶನಿವಾರ, 5 ನವೆಂಬರ್ 2022 (09:00 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಸೆಮಿಫೈನಲ್ ವರೆಗೆ ತಲುಪಿಸಲು ಐಸಿಸಿಯೇ ಅನುಕೂಲ ಮಾಡಿಕೊಡ್ತಿದೆ ಎಂಬ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆರೋಪಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ತಿರುಗೇಟು ನೀಡಿದ್ದಾರೆ.

‘ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಫ್ರಿದಿ ‘ಶಕೀಬ್ ಅಲ್ ಹಸನ್ ಕೂಡಾ ಇದನ್ನೇ ಹೇಳಿದ್ದರು. ಮಳೆ ಬಂದ ಮೇಲೆ ಮೈದಾನ ಒದ್ದೆಯಾಗಿತ್ತು. ಆದರೆ ಐಸಿಸಿಗೆ ಹೇಗಾದರೂ ಟೀಂ ಇಂಡಿಯಾವನ್ನು ಸೆಮಿಫೈನಲ್ ವರೆಗೆ ತಲುಪಿಸಬೇಕಿತ್ತು. ಹಾಗಾಗಿ ತಕ್ಷಣವೇ ಪಂದ್ಯ ಆರಂಭಿಸಲಾಯಿತು. ಐಸಿಸಿ ಟೀಂ ಇಂಡಿಯಾಗೆ ಅನುಕೂಲ ಮಾಡಿಕೊಡುವುದಕ್ಕೆ ಹಲವು ಕಾರಣಗಳಿವೆ’ ಎಂದು ಅಫ್ರಿದಿ ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿಸಿಸಿಐ ಅಧ‍್ಯಕ್ಷ ರೋಜರ್ ಬಿನ್ನಿ, ‘ನಾವು ಕ್ರಿಕೆಟ್ ಜಗತ್ತಿನ ಪ್ರಬಲರಾಗಿರಬಹುದು. ಆದರೆ ಐಸಿಸಿ ಕೂಟಗಳಲ್ಲಿ ಎಲ್ಲಾ ತಂಡಗಳನ್ನೂ ಒಂದೇ ರೀತಿ ನೋಡಲಾಗುತ್ತದೆ.  ನಾವು ಹೇಗೆ ಇತರ ತಂಡಗಳಿಂದ ಭಿನ್ನರಾಗುತ್ತೇವೆ? ಇಂತಹ ಹೇಳಿಕೆ ಸರಿಯಲ್ಲ’ ಎಂದು ಬಿನ್ನಿ ಹೇಳಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಬಾಬ್ವೆ ಟೀಂ ಇಂಡಿಯಾ ಸೋಲಿಸಲಿ..! ಪಾಕಿಸ್ತಾನ ಮಾಡ್ತಿರೋದು ಈಗ ಇದೊಂದೇ ಪ್ರಾರ್ಥನೆ!