Publish Date: Sat, 05 Nov 2022 (08:30 IST)
Updated Date: Sat, 05 Nov 2022 (09:02 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಅವಕಾಶ ಸಿಗದೇ ಬೆಂಚ್ ಕಾಯಿಸಿದ್ದ ರಿಷಬ್ ಪಂತ್ ಮತ್ತು ಯಜುವೇಂದ್ರ ಚಾಹಲ್ ಕೊನೆಗೂ ಫೀಲ್ಡಿಗಿಳಿಯಲಿದ್ದಾರಂತೆ.
ದಿನೇಶ್ ಕಾರ್ತಿಕ್ ಸ್ಥಾನಕ್ಕೆ ರಿಷಬ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್ ಸ್ಥಾನಕ್ಕೆ ಯಜುವೇಂದ್ರ ಚಾಹಲ್ ಗೆ ಅವಕಾಶ ನೀಡುವ ಸಾಧ‍್ಯತೆ ದಟ್ಟವಾಗಿದೆ.
ಹೇಗಿದ್ದರೂ ಭಾರತ ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದ್ದು, ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಸಾಧಾರಣ ಗೆಲುವು ಸಿಕ್ಕರೂ ಸಾಕು. ಹೀಗಾಗಿ ಅವಕಾಶ ಸಿಗದ ಪ್ರತಿಭಾವಂತರಿಗೆ ಅವಕಾಶ ನೀಡಿ, ಪ್ರಮುಖರಿಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದೆ.
-Edited by Rajesh Patil