ಅಡಿಲೇಡ್: ಬಾಂಗ್ಲಾದೇಶ ವಿರುದ್ಧ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡಿರುವ ಟೀಂ ಇಂಡಿಯಾ ಇನ್ನೊಂದು ಲೀಗ್ ಪಂದ್ಯವಾಡಬೇಕಿದೆ. 
									
			
			 
 			
 
 			
					
			        							
								
																	ಇದುವರೆಗೆ ನಾಲ್ಕು ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಮೂರು ಗೆಲುವು ಕಂಡಿದ್ದು, ಒಟ್ಟು 6 ಅಂಕ ಸಂಪಾದಿಸಿದೆ. ಪಾಸಿಟಿವ್ ಸರಾಸರಿ ಅಂಕವನ್ನೂ ಹೊಂದಿದೆ.
									
										
								
																	ಇದೀಗ ಕೊನೆಯ ಲೀಗ್ ಪಂದ್ಯವನ್ನು ಟೀಂ ಇಂಡಿಯಾ ದುರ್ಬಲ ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯ ಭಾನುವಾರ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.  ಈ ಪಂದ್ಯದ ಬಳಿಕ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
									
											
							                     
							
							
			        							
								
																	
-Edited by Rajesh Patil