Publish Date: Wed, 29 Apr 2026 (09:56 IST)
Updated Date: Wed, 29 Apr 2026 (10:03 IST)
ಚಂಢೀಘಡ: ಐಪಿಎಲ್ 2026 ರಲ್ಲಿ ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ನಡುವೆ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಂನಲ್ಲಿ ಇ ಸಿಗರೇಟು ಸೇದಿ ಸಿಕ್ಕಿಬಿದ್ದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ರಾಜಸ್ತಾನ್ ರಾಯಲ್ಸ್ 19.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ 6 ವಿಕೆಟ್ ಗಳ ಗೆಲುವು ದಾಖಲಿಸಿತು.
ಆದರೆ ಈ ಪಂದ್ಯದ ನಡುವೆ ರಾಜಸ್ತಾನ್ ನಾಯಕ ರಿಯಾನ್ ಪರಾಗ್ ವರ್ತನೆ ಎಲ್ಲರ ಟೀಕೆಗೆ ಗುರಿಯಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿ ಸಹ ಆಟಗಾರರ ನಡುವೆ ಕೂತಿದ್ದ ರಿಯಾನ್ ಪರಾಗ್ ಇ ಸಿಗರೇಟು ಸೇದುತ್ತಿರುವುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಭಾರೀ ಟೀಕೆ ಮಾಡಿದ್ದಾರೆ. ಸಿಗರೇಟು ಸೇದುವುದು ನಿಷಿದ್ಧವಾಗಿದೆ. ಹಾಗಿರುವಾಗ ರಿಯಾನ್ ಪರಾಗ್ ಗೆ ನಿಯಮ ಬಾಹಿರವಾಗಿ ಇಂತಹ ಕೆಲಸ ಮಾಡಲು ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ