Publish Date: Sat, 25 Apr 2026 (17:44 IST)
Updated Date: Sat, 25 Apr 2026 (17:46 IST)
ನವದೆಹಲಿ: ಐಪಿಎಲ್ 2026 ರಲ್ಲಿ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಕೆಎಲ್ ರಾಹುಲ್ ಭರ್ಜರಿ ಶತಕ ದಾಖಲಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದ ಡೆಲ್ಲಿ ಇಂದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದಕ್ಕೆ ತಕ್ಕಂತೆ ಆಡಿದ ಕೆಎಲ್ ರಾಹುಲ್ ಅಬ್ಬರದ ಇನಿಂಗ್ಸ್ ಆಡಿದರು. ಕೇವಲ 67 ಎಸೆತ ಎದುರಿಸಿದ ಅವರು 152 ರನ್ ಚಚ್ಚಿದರು. ಅವರಿಗೆ ತಕ್ಕ ಜೊತೆ ನೀಡಿದ ನಿತೀಶ್ ರಾಣಾ 44 ಎಸೆತಗಳಿಂದ 91 ರನ್ ಗಳಿಸಿದರು. ಆದರೆ ಶತಕದ ಅಂಚಿನಲ್ಲಿ ಅವರು ಎಡವಿದರು.
ಪಂಜಾಬ್ ಬೌಲರ್ ಗಳು ರನ್ ಮೆಷಿನ್ ಗಳಂತಾದರು. ಕ್ಸೇವಿಯರ್ ಬಾರ್ಟ್ ಲೆಟ್ 4 ಓವರ್ ಗಳಲ್ಲಿ ಬರೋಬ್ಬರಿ 69 ರನ್ ನೀಡಿದರು. ಇದೀಗ ಪಂಜಾಬ್ ಗೆಲ್ಲಲು 265 ರನ್ ಗಳಿಸಬೇಕಿದ್ದು, ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 15 ರನ್ ಗಳಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ