Publish Date: Sat, 25 Apr 2026 (10:18 IST)
Updated Date: Sat, 25 Apr 2026 (10:24 IST)
ಬೆಂಗಳೂರು: ಗುಜರಾತ್ ಟೈಟನ್ಸ್ ಮತ್ತು ಆರ್ ಸಿಬಿ ನಡುವಿನ ಪಂದ್ಯದ ವೇಳೆ ತನ್ನ ಪಾಡಿಗೆ ತಾನು ನಿಂತಿದ್ದ ವಿರಾಟ್ ಕೊಹ್ಲಿಯನ್ನು ಮೊಹಮ್ಮದ್ ಸಿರಾಜ್ ಹಿಂದಿನಿಂದ ಬಂದು ತಬ್ಬಿಕೊಂಡ ವಿಡಿಯೋವೊಂದು ವೈರಲ್ ಆಗಿದ್ದು ಇಬ್ಬರ ಬಾಂಡಿಂಗ್ ಬಗ್ಗೆ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2026 ರಲ್ಲಿ ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯವನ್ನು ಗುಜರಾತ್ ಟೈಟನ್ಸ್ ವಿರುದ್ಧ ಆರ್ ಸಿಬಿ 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 81 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು.
ನಿನ್ನೆಯ ಪಂದ್ಯದ ನಡುವೆ ವಿರಾಟ್ ಕೊಹ್ಲಿ ಮತ್ತು ಗುಜರಾತ್ ಬೌಲರ್ ಮೊಹಮ್ಮದ್ ಸಿರಾಜ್ ನಡುವಿನ ಕ್ಷಣ ಎಲ್ಲರ ಗಮನ ಸೆಳೆದಿದೆ. ಮೊಹಮ್ಮದ್ ಸಿರಾಜ್ ಈ ಮೊದಲು ಆರ್ ಸಿಬಿಯಲ್ಲಿದ್ದವರು. ಕಳೆದ ಸೀಸನ್ ನಲ್ಲಷ್ಟೇ ಅವರು ಗುಜರಾತ್ ಪಾಲಾಗಿದ್ದರು.
ಹಾಗಿದ್ದರೂ ಅವರು ಈಗಲೂ ಎಲ್ಲೇ ಹೋದರೂ ಆರ್ ಸಿಬಿ ಅಭಿಮಾನಿಗಳಿಗೆ ವಿಶೇಷ ಪ್ರೀತಿ ಇದ್ದೇ ಇದೆ. ಇದೀಗ ನಿನ್ನೆಯ ಪಂದ್ಯದ ವೇಳೆ ತಮ್ಮ ಪಾಡಿಗೆ ತಾವು ಬೌಂಡರಿ ಗೆರೆ ಬಳಿ ನಿಂತಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿನಿಂದ ಹೋಗಿ ತಬ್ಬಿಕೊಂಡ ಸಿರಾಜ್ ಬಳಿಕ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಕೊಹ್ಲಿ ಮತ್ತು ಸಿರಾಜ್ ನಡುವಿನ ಬಾಂಡಿಂಗ್ ಯಾವತ್ತೂ ವಿಶೇಷ ಎನ್ನುವುದಕ್ಕೆ ಈ ಕ್ಷಣ ಸಾಕ್ಷಿಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ