Daily Horoscope

Select Your Language

Notifications

webdunia
webdunia
webdunia
webdunia

IPL 2026: ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಿಂದಿಕ್ಕಲು ಆರ್ ಸಿಬಿಗೆ ಇಂದು ಉತ್ತಮ ಅವಕಾಶ

RCB 2026
ಬೆಂಗಳೂರು: ಐಪಿಎಲ್ 2026 ರಲ್ಲಿ ಇಂದು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದ್ದು, ಅಂಕಪಟ್ಟಿಯಲ್ಲಿ ರಾಜಸ್ಥಾನ್ ಹಿಂದಿಕ್ಕಲು ಉತ್ತಮ ಅವಕಾಶ ಎದುರಾಗಿದೆ.

ಕಳೆದ ಪಂದ್ಯವನ್ನು ಸೋತಿರುವ ಆರ್ ಸಿಬಿ ಇದೀಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗೆಲುವು ಕಂಡಿದ್ದ ರಾಜಸ್ಥಾನ್ ಎರಡನೇ ಸ್ಥಾನದಲ್ಲಿದೆ. ಇಂದು ಏಳನೇ ಪಂದ್ಯವಾಡಲಿರುವ ಆರ್ ಸಿಬಿ ಗೆದ್ದರೆ ಎರಡನೇ ಸ್ಥಾನಕ್ಕೇರುವ ಅವಕಾಶವಿದೆ.

ಎಲ್ಲಾ ಪಂದ್ಯಗಳಲ್ಲೂ ಟಾಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಇಂದು ಕೂಡಾ ಆರ್ ಸಿಬಿ ಟಾಸ್ ಗೆಲ್ಲುವುದು ತುಂಬಾ ಮುಖ್ಯವಾಗಲಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲಿ ಮೊದಲ ಸೋಲುಂಡಿದ್ದ ಆರ್ ಸಿಬಿ ಇಂದು ಮತ್ತೆ ಅದೇ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು.

ಅತ್ತ ಗುಜರಾತ್ ಟೈಟನ್ಸ್ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತಿದೆ. ಈ ಟೂರ್ನಿಯಲ್ಲಿ ಗುಜರಾತ್ ಪ್ರದರ್ಶನ ಹೇಳಿಕೊಳ್ಳುವಷ್ಟಿಲ್ಲ. ಹೀಗಾಗಿ ಇಂದು ಆರ್ ಸಿಬಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎದುರಾಳಿಯಾಗಿದ್ದರು ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ಗೆ ಮನಸೋತ ಬುಮ್ರಾ, ಹಾರ್ದಿಕ್, ಸೂರ್ಯಕುಮಾರ್‌, ಮಾಡಿದ್ದೇನು ನೋಡಿ, Video