ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ಕ್ರಿಕೆಟ್ ಆಡಲಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದು ಸೌಟು ಹಿಡಿದು ಬಾಣಸಿಗನಾಗಿದ್ದಾರೆ. ಅಷ್ಟಕ್ಕೂ ಅವರಿಗೆ ಏನಾಯ್ತು ಇಲ್ಲಿದೆ ನೋಡಿ ವಿವರ.
ರಿಷಭ್ ಪಂತ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಆದರೆ ನಾಲ್ಕನೇ ಪಂದ್ಯದ ವೇಳೆ ಅವರ ಕಾಲಿಗೆ ಚೆಂಡು ಬಡಿದ ಪರಿಣಾಮ ಮೂಳೆ ಮುರಿತವಾಗಿತ್ತು. ಇದರಿಂದಾಗಿ ಅವರು ಐದನೇ ಪಂದ್ಯ ಆಡಿರಲಿಲ್ಲ.
ಇದೀಗ ರಿಷಭ್ ಪಂತ್ ತಮ್ಮ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸದ್ಯಕ್ಕೆ ಅವರಿಗೆ ತಮ್ಮ ಮುರಿದ ಮೂಳೆಯಿಂದಾಗಿ ಕ್ರಿಕೆಟ್ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರು ಹತಾಶೆಗೊಳಗಾಗಿದ್ದು, ನನ್ನ ಈ ಪರಿಸ್ಥಿತಿಯನ್ನು ನಾನು ಧ್ವೇಷಿಸುತ್ತೇನೆ. ಸದ್ಯಕ್ಕೆ ನನಗೆ ಮಾಡಲು ಸಾಧ್ಯವಾಗುತ್ತಿರುವ ಕೆಲಸ ಎಂದರೆ ಇದೊಂದೇ ಎಂದು ಖ್ಯಾತ ಬಾಣಿಸಗನೊಂದಿಗೆ ಪಿಜ್ಜಾ ಮಾಡಲು ಹೊರಟಿದ್ದಾರೆ. ಸದ್ಯಕ್ಕೆ ನಾನೀಗ ಕ್ರಿಕೆಟಿಗ ಅಲ್ಲ ಶೆಫ್ ಪಂತ್ ಎಂದು ತಮ್ಮನ್ನು ತಾವು ತಮಾಷೆ ಮಾಡಿಕೊಂಡಿದ್ದಾರೆ.